varthabharthi

ಕರ್ನಾಟಕ

ಬಾಲಕಿಯ ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ವಾರ್ತಾ ಭಾರತಿ : 12 Jun, 2019

ಬೆಳಗಾವಿ, ಜೂ.12: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ, ತಾಲೂಕಿನ ಅಂಬೇವಾಡಿಯ ಲಕ್ಷ್ಮಿಗಲ್ಲಿ ನಿವಾಸಿ ಜೋತ್ಯೆಶ್ ಶಿವಾಜಿ ನಾವಿ(23) ಎಂಬಾತನಿಗೆ 3ನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ಹಾಗೂ 22 ಸಾವಿರ ರೂ.ದಂಡ ವಿಧಿಸಿದೆ.

ನ್ಯಾಯಾಧೀಶ ಜಿ.ನಂಜುಂಡಯ್ಯ ಬುಧವಾರ ಆದೇಶ ನೀಡಿದರು. ಸರಕಾರದ ಪರವಾಗಿ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.

'ಇಲ್ಲಿಗೆ ಸಮೀಪದ ಹಿಂಡಲಗಾ ಮುಖ್ಯರಸ್ತೆಯಲ್ಲಿ ಜೋತ್ಯೆಶನು ಹೇರ್ ಕಟಿಂಗ್ ಅಂಗಡಿ ಇಟ್ಟುಕೊಂಡಿದ್ದ. 2018ರ ಮಾ.9ರಂದು ಬೈಕ್ ಮೇಲೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ಮಹಾರಾಷ್ಟ್ರದ ಬೂದರಗಡ ತಾಲೂಕಿನ ಶೇಲೋಳಿ ಗ್ರಾಮದಲ್ಲಿ ಒಂದು ವಾರ ಬಾಡಿಗೆ ಮನೆ ಮಾಡಿ ಬಾಲಕಿಯನ್ನು ಇಟ್ಟು, ಪ್ರತಿ ದಿನ ರಾತ್ರಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದ್ದು, ಮುಂಬೈನಲ್ಲಿರುವ ತನ್ನ ಸಂಬಂಧಿಕರ ಮನೆಗೂ ಬಾಲಕಿಯನ್ನು ಕರೆಯೊಯ್ದಿದ್ದ. ನಂತರ ಎ.5ರಂದು ಬೆಳಗಾವಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು, ಬಿಟ್ಟು ಹೋಗಿದ್ದ ಎಂದು ತನಿಖಾಧಿಕಾರಿ ರಮೇಶ್ ಬಿ. ಗೋಕಾಕ ಆರೋಪ ಪಟ್ಟಿ ಸಲ್ಲಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)