varthabharthi

ಕರಾವಳಿ

ಭಟ್ಕಳ: ಬಿರುಗಾಳಿಗೆ 6 ವಿದ್ಯುತ್ ಕಂಬ ಧರೆಗೆ

ವಾರ್ತಾ ಭಾರತಿ : 12 Jun, 2019

ಭಟ್ಕಳ: ಮಂಗಳವಾರ ತಡ ರಾತ್ರಿ ಭಟ್ಕಳ ತಾಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನಗರದ ಸಾಗರ ರಸ್ತೆಯ ಡಿಪಿ ಕಾಲೋನಿಯಲ್ಲಿ 6 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿದ್ದು ಸುಮಾರು 1.25ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹೆಸ್ಕಾಂ ಏರಿಯಾ ಇಂಜಿನೀಯರ್ ಶ್ರೀಕಾಂತ್ ನಾಯ್ಕ, ಮಂಗಳವಾರ ರಾತ್ರಿ ಉಂಟಾದ ಮಳೆ ಬಿರುಗಾಳಿಯಿಂದಾಗಿ ನಗರ ವ್ಯಾಪ್ತಿಯ ಡಿಪಿ ಕಾಲೋನಿಯೊಂದರಲ್ಲೆ ಆರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು ಇದರಿಂದಾಗಿ ಆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ಹೆಸ್ಕಾಂ ಇಲಾಖೆಗೆ ಸುಮಾರು 1.25ಲ. ರೂ ನಷ್ಟ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ಯಾವೆಲ್ಲ ತೊಂದರೆ ಉಂಟಾಗಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲ ಎಂದ ಅವರು ವಿದ್ಯುತ್  ಹೊಸ ವಿದ್ಯುತ್ ಕಂಬಗಳನ್ನು ಹಾಕುವ ಕಾರ್ಯ ನಡೆದಿದ್ದು ಕೆಲಸ ಪೂರ್ಣಗೊಂಡ ಬಳಿಕ ಆ ಭಾಗದಲ್ಲಿ ವಿದ್ಯುತ್ ಮರುಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)