varthabharthi

ಕರ್ನಾಟಕ

ಮಂಡ್ಯ: ಸತೀಶ್‍ಗೆ ಕವಿವೃಕ್ಷ ದ್ರೋರ್ಣಾಚಾರ್ಯ ಪ್ರಶಸ್ತಿ

ವಾರ್ತಾ ಭಾರತಿ : 12 Jun, 2019

ಮಂಡ್ಯ, ಜೂ.12: ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ರಾಜ್ಯ ಕವಿವೃಕ್ಷ ಬಳಗದ ವತಿಯಿಂದ ನೀಡಲಾಗುವ 'ಕವಿವೃಕ್ಷ ದ್ರೋರ್ಣಾಚಾರ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಹಾವೇರಿಯ ಹೊಸಮಠದ ಕಲ್ಯಾಣ ಮಂಟಪದಲ್ಲಿ ಜೂ.16 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕವಿವೃಕ್ಷ ಬಳಗದ ಸಂಸ್ಥಾಪನ ದಿನಾಚರಣೆ ಹಾಗೂ ಕವಿಕಾವ್ಯ ಸಂಗಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ವೇದಿಕೆಯ ರಾಜ್ಯಾಧ್ಯಕ್ಷ ಪ್ರೊ.ವಿರೇಶ್ ಹಿತ್ತಲಮನಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)