varthabharthi

ಕ್ರೀಡೆ

ರಿಷಭ್ ಪಂತ್ ಇಂದು ಇಂಗ್ಲೆಂಡ್‌ಗೆ

ವಾರ್ತಾ ಭಾರತಿ : 12 Jun, 2019

ಮುಂಬೈ, ಜೂ.12: ಯುವ ವಿಕೆಟ್‌ಕೀಪರ್-ದಾಂಡಿಗ ರಿಷಭ್ ಪಂತ್ ಗುರುವಾರ ಬೆಳಗ್ಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಶಿಖರ್ ಧವನ್ ಮೂರು ವಾರ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ಪಂತ್ ಇಂಗ್ಲೆಂಡ್‌ಗೆ ತೆರಳುತ್ತಿದ್ದಾರೆ. ಗಾಯಾಳು ಧವನ್ 15 ಸದಸ್ಯರ ತಂಡದಲ್ಲಿ ಮುಂದುವರಿಯಲಿದ್ದಾರೆ.

ಪಂತ್‌ಗೆ ಉತ್ತಮ ವಿಮಾನದ ವ್ಯವಸ್ಥೆ ಮಾಡಲು ಬಿಸಿಸಿಐ ಯತ್ನಿಸುತ್ತಿದೆ. ಹೀಗಾಗಿ ಪಂತ್ ಆದಷ್ಟು ಬೇಗನೆ ಇಂಗ್ಲೆಂಡ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

‘‘ಮೀಸಲು ಆಟಗಾರನಾಗಿರುವ ಪಂತ್‌ರನ್ನು ಇಂಗ್ಲೆಂಡ್‌ನ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಲಿ ಎಂಬ ಉದ್ದೇಶದಿಂದ ಅವರನ್ನು ಮುಂಚಿತವಾಗಿ ಕರೆಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಧವನ್ 3 ವಾರದಲ್ಲಿ ಸಂಪೂರ್ಣ ಗುಣಮುಖವಾಗದಿದ್ದರೆ, ಬದಲಿ ಆಟಗಾರನಿಗಾಗಿ ಐಸಿಸಿಗೆ ಮನವಿ ಸಲ್ಲಿಸುತ್ತೇವೆ. ಅವರು(ರಿಷಭ್)ತಕ್ಷಣವೇ ತಂಡವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)