varthabharthi

ನಿಮ್ಮ ಅಂಕಣ

ಅಂತ್ಯ ಸಂಸ್ಕಾರದಲ್ಲೂ ಮಾದರಿ

ವಾರ್ತಾ ಭಾರತಿ : 14 Jun, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಸಾಸಿವೆಕಾಳಿನಷ್ಟು ಸಾಧನೆಯನ್ನು ಮಾಡಿದ ಜನ ಅನೇಕ ರೀತಿಯ ಸವಲತ್ತುಗಳನ್ನು ಬಾಳಿನುದ್ದಕ್ಕೂ ಸರಕಾರದಿಂದ ಬಯಸುತ್ತಾರೆ. ಇನ್ನು ಇಂಥವರು ನಿಧನವಾದ ನಂತರ ಸರಕಾರದ ಎಲ್ಲಾ ಗೌರವಗಳನ್ನೂ ಪಡೆಯುವುದರ ಜೊತೆಗೆ ಅಂತ್ಯಸಂಸ್ಕಾರ ಹೀಗೆಯೇ ಆಗಬೇಕು ಎಂಬ ಆದೇಶಗಳನ್ನೂ ನೀಡುತ್ತಾರೆ. ಆದರೆ, ನಾಟಕ ಕ್ಷೇತ್ರವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆಯನ್ನು ಮಾಡಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದಿದ್ದ ಗಿರೀಶ್ ಕಾರ್ನಾಡ್‌ರವರು ತಮ್ಮ ಅಂತ್ಯ ಸಂಸ್ಕಾರವನ್ನು ಯಾವ ರೀತಿ ನೆರವೇರಿಸಬೇಕೆಂಬ ಕಠಿಣವಾದ ಆದೇಶಗಳನ್ನು ಮನೆಯವರಿಗೆ ನೀಡಿದ್ದರು. ಅದರಂತೆ ಸರಕಾರದ ಯಾವ ಸೌಲಭ್ಯವನ್ನೂ ಪಡೆಯದೆ, ಯಾವ ಗೌರವವನ್ನೂ ಬಯಸದೆ, ಅಬ್ಬರದ, ಆರ್ಭಟದ, ತೋರಿಕೆಯ ನಡವಳಿಕೆಗಳಿಲ್ಲದೆ ಸರಳವಾದ ರೀತಿಯಲ್ಲಿ ತಮ್ಮ ಅಂತ್ಯಸಂಸ್ಕಾರವನ್ನು ನೆರವೇರಿಸಿಕೊಂಡ ಕಾರ್ನಾಡರು ಒಂದು ಮಾದರಿಯಾಗಿದ್ದಾರೆ ಈ ಮಾದರಿಯನ್ನು ಅನುಸರಿಸಿ ಇನ್ನು ಮುಂದಾದರೂ ನಮ್ಮ ರಾಜಕಾರಣಿಗಳೂ ಸೇರಿದಂತೆ ಸಮಾಜದ ಉನ್ನತ ವ್ಯಕ್ತ್ತಿಗಳು ತೀರಿಕೊಂಡಾಗ ಸರಕಾರದ ಪುಕ್ಕಟೆ ಗೌರವಗಳನ್ನು ಪಡೆಯುವ ಹುಚ್ಚನ್ನು ಬಿಟ್ಟು, ಕಾರ್ನಾಡ್‌ರ ರೀತಿಯಲ್ಲಿ ಸಾವು ಒಂದು ಖಾಸಗಿ ಘಟನೆ ಎಂಬ ರೀತಿಯಲ್ಲಿ ನಡೆದುಕೊಂಡು ಮಾದರಿಯಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)