ಮೋದಿ ಬಳಿಕ ಹೊಸ ಮಾವಿನ ತಳಿಗೆ ಈ ಬಿಜೆಪಿ ನಾಯಕನ ಹೆಸರು!
ಕೊಲ್ಕತ್ತಾ, ಜೂ.16: ವೈವಿಧ್ಯಮಯ ಮಾವು ಬೆಳೆಯುವುದಕ್ಕೆ ಹೆಸರಾಗಿರುವ ಹಾಜಿ ಕಲೀಮುಲ್ಲಾ ಎಂಬ ರೈತರೊಬ್ಬರು ಉತ್ತಮ ಜಾತಿಯ ಮಾವುಗಳಿಗೆ ಖ್ಯಾತ ಗಣ್ಯರ ಹೆಸರುಗಳನ್ನು ಇಡುತ್ತಾರೆ. ಹಲವು ತಳಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿರುವ ಅವರು, ಇದೀಗ ಹೊಸ ತಳಿಗೆ ಅಮಿತ್ ಶಾ ಎಂದು ಹೆಸರಿಟ್ಟಿದ್ದಾರೆ.
ಅತಿಹೆಚ್ಚು ತೂಕದ ಮತ್ತು ಉತ್ತಮ ರುಚಿಯ ಮಾವಿನ ತಳಿಗೆ ಶಾ ಅವರ ಹೆಸರಿಡಲಾಗಿದೆ ಎಂದು ವರದಿಯಾಗಿದೆ. ಕೊಲ್ಕತ್ತಾದ ಹುಸ್ನ್-ಎ-ಆರಾ ಮತ್ತು ಲಕ್ನೋದ ದುಸ್ಸೇಹ್ರಿ ತಳಿಗಳ ಸಂಗಮದಿಂದ ರೂಪುಗೊಂಡ ಹೊಸ ತಳಿಗೆ ಶಾ ಹೆಸರಿಡಲಾಗಿದೆ. ಈ ಮಾವು ಇದೀಗ ಬಲಿತಿದ್ದು, ಸಾರ್ವಜನಿಕರಿಗೆ ಸದ್ಯವೇ ಲಭ್ಯವಾಗಲಿದ್ದು, ಈಗಾಗಲೇ ನರೇಂದ್ರ ಮೋದಿ, ಐಶ್ವರ್ಯ ರೈ, ಸಚಿನ್ ತೆಂಡೂಲ್ಕರ್ ಅವರ ಹೆಸರಿನ ತಳಿಗಳು ಇವರಲ್ಲಿ ಲಭ್ಯ.
Next Story