ದುಬೈ ಬೀಚ್ನಲ್ಲಿ ಮುಳುಗಿ ಭಾರತೀಯ ಮೃತ್ಯು
ದುಬೈ,ಜೂ.16: ಕುಟುಂಬದ ಜೊತೆ ಸುತ್ತಾಡಲು ತೆರಳಿದ್ದ ಸಂದರ್ಭದಲ್ಲಿ ಭಾರತೀಯ ಸಂಜಾತರೊಬ್ಬರು ದುಬೈಯ ಜುಮೈರಾ ಬೀಚ್ನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೃತ ವ್ಯಕ್ತಿಯನ್ನು 40ರ ಹರೆಯದ ಜಾನ್ ಪ್ರೀತಮ್ ಪೌಲ್ ಎಂದು ಗುರುತಿಸಲಾಗಿದೆ. ಇವರು ಶನಿವಾರದಂದು ತನ್ನ ಮೂವರು ಮಕ್ಕಳು, ಸಹೋದರಿ ಹಾಗೂ ಆಕೆಯ ಪತಿಯೊಂದಿಗೆ ದುಬೈಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜುಮೈರಾ ಬೀಚ್ಗೆ ತೆರಳಿದ ಕುಟುಂಬ ಅಲ್ಲಿ ನೀರಿನಲ್ಲಿ ಮೋಜು ಮಾಡುವ ವೇಳೆ ಕುಸಿದು ಬಿದ್ದ ಜಾನ್ ಸಾವನ್ನಪ್ಪಿದ್ದಾರೆ ಎಂದು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಜಾನ್ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ಕಳೆದ 14 ವರ್ಷಗಳಿಂದ ಯುಎಇಯಲ್ಲಿ ನೆಲೆಸಿರುವ ಜಾನ್ ಅಲ್ಲಿನ ರೇಡಿಯೊ ಸ್ಟೇಶನ್ ಗಿಲ್ಲಿ ಎಫ್.ಎಂನ ಮಾರುಕಟ್ಟೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
Next Story