varthabharthi

ಕ್ರೀಡೆ

ಪಾಕ್ ನಾಯಕನ ‘ಆಕಳಿಕೆ’ ವೈರಲ್

ವಾರ್ತಾ ಭಾರತಿ : 17 Jun, 2019

ಮ್ಯಾಂಚೆಸ್ಟರ್, ಜೂ.16: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಝ್ ಅಹ್ಮದ್ ವಿಕೆಟ್ ಕೀಪಿಂಗ್ ವೇಳೆ ಆಗಾಗ ಆಕಳಿಸುತ್ತಿದ್ದರು.

  ನಾಯಕನ ಆಕಳಿಕ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ. ಸರ್ಫರಾಝ್ ಆಕಳಿಸುತ್ತಿರುವ ವೀಡಿಯೋವನ್ನು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ. ಅಣಕಿಸಿರುವ ಸಂದೇಶಗಳು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಭಾರತದ ದಾಂಡಿಗರು ಪಾಕ್‌ನ ಬೌಲರ್‌ಗಳನ್ನು ಮನಬಂದಂತೆ ದಂಡಿಸುತ್ತಿದ್ದಾಗ ದಕ್ಕೆ ಕಡಿವಾಣ ಹಾಕಬೇಕಿದ್ದ ನಾಯಕನ ವರ್ತನೆ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)