ವಿಶ್ವಕಪ್: ಶಾಕಿಬ್ ಶತಕ; ಗೆಲುವಿನತ್ತ ಬಾಂಗ್ಲಾ
ಟೌಂಟನ್, ಜೂ.17: ಸ್ಟಾರ್ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ವೆಸ್ಟ್ಇಂಡೀಸ್ ವಿರುದ್ಧ ವಿಶ್ವಕಪ್ನ 23ನೇ ಪಂದ್ಯದಲ್ಲಿ ವೃತ್ತಿ ಜೀವನದ 9ನೇ ಶತಕ ಸಿಡಿಸುವುದರೊಂದಿಗೆ ಬಾಂಗ್ಲಾದೇಶವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 321 ರನ್ ಗಳಿಸಿ ಬಾಂಗ್ಲಾಕ್ಕೆ ಕಠಿಣ ಸವಾಲು ನೀಡಿತು.
ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ರೊಂದಿಗೆ 2ನೇ ವಿಕೆಟ್ಗೆ 69 ರನ್ ಜೊತೆಯಾಟ ನಡೆಸಿದ ಶಾಕಿಬ್ ಲಿಟನ್ ದಾಸ್(52, 47 ಎಸೆತ) ಅವರೊಂದಿಗೆ ನಾಲ್ಕನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 132 ರನ್ ಸೇರಿಸಿ 36 ಓವರ್ಗಳ ಅಂತ್ಯಕ್ಕೆ ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 265ರನ್ ಗಳಿಸಲು ನೆರವಾಗಿದ್ದಾರೆ. ಬಾಂಗ್ಲಾಕ್ಕೆ 14 ಓವರ್ಗಳಲ್ಲಿ 58 ರನ್ ಅಗತ್ಯವಿದೆ.
Next Story