varthabharthi

ಕ್ರೀಡೆ

41 ಓವರ್ ಗಳಲ್ಲೇ 322 ರನ್ ಗುರಿ ತಲುಪಿದ ಬಾಂಗ್ಲಾ

ಶಾಕಿಬ್ ಸಾಹಸ: ವಿಂಡೀಸ್ ವಿರುದ್ಧ ಭರ್ಜರಿ ಜಯ ಗಳಿಸಿದ ಬಾಂಗ್ಲಾ

ವಾರ್ತಾ ಭಾರತಿ : 17 Jun, 2019

ಟೌಂಟನ್, ಜೂ.17: ಸ್ಟಾರ್ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಭರ್ಜರಿ ಶತಕ ಹಾಗೂ ಲಿಟನ್ ದಾಸ್ ಅರ್ಧಶತಕದ ಕೊಡುಗೆ ಸಹಾಯದಿಂದ ವೆಸ್ಟ್‌ಇಂಡೀಸ್ ವಿರುದ್ಧ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶ ಏಳು ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ. ಶಾಕಿಬ್ 83 ಎಸೆತಗಳಲ್ಲಿ ಥಾಮಸ್ ಎಸೆತವನ್ನು ಬೌಂಡರಿ ಗೆರೆ ದಾಟಿಸುವುದರೊಂದಿಗೆ ವೃತ್ತಿಜೀವನದ 9ನೇ ಶತಕ ಸಿಡಿಸಿ ಬಾಂಗ್ಲಾದೇಶವನ್ನು ಸ್ಮರಣೀಯ ಗೆಲುವಿನತ್ತ ಮುನ್ನಡೆಸಿದರು.

ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 321 ರನ್ ಗಳಿಸಿ ಬಾಂಗ್ಲಾಕ್ಕೆ ಕಠಿಣ ಸವಾಲು ನೀಡಿತು.

ಶಾಕಿಬ್(ಔಟಾಗದೆ 124, 99 ಎಸೆತ, 16 ಬೌಂಡರಿ) ಹಾಗೂ ಲಿಟನ್ ದಾಸ್(ಔಟಾಗದೆ 94, 69 ಎಸೆತ, 8 ಬೌಂಡರಿ, 4 ಸಿಕ್ಸರ್)4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 189 ರನ್ ಸೇರಿಸಿ ತಂಡಕ್ಕೆ ಇನ್ನೂ 51 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

ಆರಂಭಿಕ ಆಟಗಾರ ತಮೀಮ್ ಇಕ್ಬಾಲ್(48, 53 ಎಸೆತ) ಅವರೊಂದಿಗೆ 2ನೇ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿದ ಶಾಕಿಬ್ ತಂಡದ ಗೆಲುವಿನ ರೂವಾರಿಯಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)