varthabharthi

ಕರಾವಳಿ

ಕಡಬ: ನೀತಿ ಚಾರಿಟೇಬಲ್ ಟ್ರಸ್ಟ್ , ಬ್ಲಡ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರ

ವಾರ್ತಾ ಭಾರತಿ : 17 Jun, 2019

ಕಡಬ : ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ನೀತಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು, ಕಡಬ ಹಾಗೂ  ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ  ಬ್ಲಡ್ ಬ್ಯಾಂಕ್ ಪುತ್ತೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಕಡಬದ ಗೌಡ ಸಮಾಜ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ವೈದ್ಯಾದಿಕಾರಿ ಡಾ. ರಾಮಚಂದ್ರ ಭಟ್ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ರಕ್ತ ದಾನ ಶಿಬಿರದಲ್ಲಿ ಒಟ್ಟು 44 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೋಟರಿ ಕ್ಯಾಂಪ್ಕೋ  ಬ್ಲಡ್ ಬ್ಯಾಂಕ್ ಪುತ್ತೂರು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಶಿಬರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ಪ್ರತಿಯೊಬ್ಬ ದಾನಿಗೂ ಆಯೋಜಕರು ಸಸಿ ನೀಡುವುದರ ಮೂಲಕ ಪರಿಸರ ಸಂರಕ್ಷಣೆಯ  ಬಗ್ಗೆ ಜಾಗೃತಿ ಮೂಡಿಸಿದರು.

ಮುಖ್ಯ ಅತಿಥಿಗಳಾಗಿ ನೀತಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ರಾಜ್ಯಾಧ್ಯಕ್ಷರಾದ ಜಯನ್.ಟಿ, ICYM ಮಂಗಳೂರು ಕೇಂದ್ರೀಯ ಸಹ ಕಾರ್ಯದರ್ಶಿ ಅನೀಶ್, ನೀತಿ ತಂಡ ಗೊಳಿತೊಟ್ಟು ಶಾಖೆ ಅಧ್ಯಕ್ಷರಾದ ಮನೋಜ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನಿರ್ವಾಹಕರಾದ ಅಶ್ರಫ್ ಅರಬಿ ಕಲ್ಲಡ್ಕ, ಇಫಾಝ್ ಬನ್ನೂರು, ಸಲೀಂ ಮುರ ಹಾಗೂ ನೀತಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು, ಕಡಬ  ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಡಿ ಝೋನ್ ಮೀಡಿಯಾದ ಕೆ.ಎಂ ಶರೀಫ್ ಕಡಬರವರು ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)