varthabharthi


ಗಲ್ಫ್ ಸುದ್ದಿ

ಜೂ.21: ದುಬೈಯಲ್ಲಿ ರಕ್ತದಾನ ಶಿಬಿರ

ವಾರ್ತಾ ಭಾರತಿ : 18 Jun, 2019

ದುಬೈ, ಜೂ 18: ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ದುಬೈಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್  ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಹಕಾರದೊಂದಿಗೆ ದುಬೈ ಹೆಲ್ತ್ ಅಥಾರಿಟಿ ಆ್ಂಡ್ ಕಮ್ಯೂನಿಟಿ ಡೆವಲಪ್ ಮೆಂಟ್ ಸಹಭಾಗಿತ್ವದಲ್ಲಿ ಜೂ.21ರಂದು ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ದುಬೈ ಯ ಲತೀಫಾ ಹಾಸ್ಪಿಟಲ್ ನಲ್ಲಿ ಅಂದು ಬೆಳಗ್ಗೆ 8:30ರಿಂದ ಅಪರಾಹ್ನ 2:30ರವರೆಗೆ ನಡೆಯವ ಶಿಬಿರದಲ್ಲಿ ಯು ಎ ಇ ಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು  ಪಾಲ್ಗೊಂಡು ರಕ್ತದಾನ ಮಾಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

ರಕ್ತದಾನ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದುಬೈಯ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್  ಮ್ಯಾನೇಜರ್ ಮುಹಮ್ಮದ್ ಶಾಫಿ (+971 55 450 5431) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ವ್ಯವಸ್ಥಾಪಕ  ಸಿರಾಜುದ್ದೀನ್ ಪರ್ಲಡ್ಕ (+971 50 578 6560) ಮತ್ತು ಶಾಫಿ ಮಾಣಿ (+971 55 715 6408) ಇವರನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)