ವಿಶ್ವಕಪ್: ಇಂಗ್ಲೆಂಡ್ಗೆ 150 ರನ್ ಜಯ
ಅಫ್ಘಾನಿಸ್ತಾನ 8 ವಿಕೆಟ್ಗೆ 247
ಮ್ಯಾಂಚೆಸ್ಟರ್, ಜೂ.18: ಮಧ್ಯಮ ಕ್ರಮಾಂಕದ ದಾಂಡಿಗ ಹಶ್ಮತುಲ್ಲಾ ಶಾಹಿದಿ ಏಕಾಂಗಿ ಹೋರಾಟದ(76)ಹೊರತಾಗಿಯೂ ಇಂಗ್ಲೆಂಡ್ ತಂಡ ವಿಶ್ವಕಪ್ನ 24ನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 150 ರನ್ಗಳಿಂದ ಮಣಿಸಿತು.
ಗೆಲ್ಲಲು 398 ರನ್ ಗುರಿ ಪಡೆದ ಅಫ್ಘಾನಿಸ್ತಾನ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 247 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆತಿಥೇಯ ಇಂಗ್ಲೆಂಡ್ನ ಪರ ಸ್ಪಿನ್ನರ್ ಆದಿಲ್ ರಶೀದ್(3-66)ಯಶಸ್ವಿ ಬೌಲರ್ ಎನಿಸಿಕೊಂಡರು. ಆರ್ಚರ್(2-52) ಹಾಗೂ ಮಾರ್ಕ್ವುಡ್(2-40)ತಲಾ ಎರಡು ವಿಕೆಟ್ ಪಡೆದರು.
ಅಫ್ಘಾನ್ ಪರ ರಹ್ಮತ್ ಶಾ(46), ಅಸ್ಘರ್ ಅಫ್ಗಾನ್(44) ಹಾಗೂ ನಾಯಕ ಗುಲ್ಬದ್ದೀನ್ ನೈಬ್(37) ಎರಡಂಕೆಯ ಸ್ಕೋರ್ ಗಳಿಸಿದರು.
Next Story