varthabharthi

ರಾಷ್ಟ್ರೀಯ

ಬಿಜೆಪಿಯ ಓಂ ಬಿರ್ಲಾ ನೂತನ ಲೋಕಸಭಾ ಸ್ಪೀಕರ್

ವಾರ್ತಾ ಭಾರತಿ : 18 Jun, 2019

 ಹೊಸದಿಲ್ಲಿ, ಜೂ.18: ರಾಜಸ್ಥಾನದ ಕೋಟ-ಬುಂಡಿ ಕ್ಷೇತ್ರದ ಬಿಜೆಪಿ ಸಂಸದ ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ

ಪ್ರಧಾನಿ ಮೋದಿ, ಬಿರ್ಲಾ ಅವರ ಹೆಸರನ್ನು ಪ್ರಸ್ತಾವಿಸಿದರು. ಇದಕ್ಕೆ ಎನ್‌ಡಿಎಯ ಎಲ್ಲ ಮಿತ್ರಪಕ್ಷಗಳು, ವೈಎಸ್‌ಆರ್ ಕಾಂಗ್ರೆಸ್‌ಮ ಬಿಜು ಜನತಾದಳ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಬೆಂಬಲ ಸೂಚಿಸಿದವು. ಸ್ಪೀಕರ್ ಹುದ್ದೆಗೆ ಬಿರ್ಲಾ ಅವರ ಹೆಸರನ್ನು ಪ್ರಸ್ತಾವಿಸಿ ಮತ್ತು ಬುಧವಾರ ನಡೆಯಲಿರುವ ಚುನಾವಣೆಗೆ ಅಧಿಸೂಚನೆ ಜಾರಿ ಮಾಡುವಂತೆ ಲೋಕಸಭಾ ಕಾರ್ಯಾಲಯಕ್ಕೆ ಬಿಜೆಪಿ ನೋಟಿಸ್ ನೀಡಿದೆ. ಓಂ ಬಿರ್ಲಾ, ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಮೀಪವರ್ತಿ ಎಂದು ಹೇಳಲಾಗುತ್ತಿದೆ.

2014ರಲ್ಲಿ ಮೊದಲ ಬಾರಿ ಚುನಾವಣೆ ಗೆದ್ದ ಓಂ ಬಿರ್ಲಾ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಬಾರಿ ಕೋಟ-ಬುಂಡಿ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರು 2003, 2008 ಮತ್ತು 2013 ಹೀಗೆ ಸತತ ಮೂರು ಬಾರಿ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)