ಮಂಗಳೂರು: ಮಿಸ್ಬಾಹ್ ಮಹಿಳಾ ಕಾಲೇಜು ಶೇ. 100 ಫಲಿತಾಂಶ
ಫಾತಿಮಾತ್ ಸುಫಯ್ಯಾ, ಫಾತಿಮಾ ಝೋಹರಾ, ಬೀಫಾತಿಮಾ ಸುಮೈರಾ
ಮಂಗಳೂರು ವಿಶ್ವವಿದ್ಯಾನಿಲಯದಿಂದ ನಡೆಸಲ್ಪಟ್ಟ ಬಿ.ಎ ಮತ್ತು ಬಿ.ಕಾಂ ಪರೀಕ್ಷೆಗಳಲ್ಲಿ ಕಾಟಿಪಳ್ಳದ ಮಿಸ್ಬಾಹ್ ಮಹಿಳಾ ಕಾಲೇಜು ಶೇ 100 ಫಲಿತಾಂಶವನ್ನು ದಾಖಲಿಸಿದೆ.
ಫಾತಿಮಾತ್ ಸುಫಯ್ಯಾ ಶೇ 92.67, ಫಾತಿಮಾ ಝೋಹರಾ ಶೇ 88.56 ಬೀಫಾತಿಮಾ ಸುಮೈರಾ ಶೇ 86.67 ವಿಶಿಷ್ಟ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು ಉಳಿದ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಮಿಸ್ಬಾಹ್ ಮಹಿಳಾ ಕಾಲೇಜಿನ ಸಂಚಾಲಕರಾದ ಬಿ.ಎ.ನಝೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ ಕೋರ್ಸ್ಗಳಿವೆ.
Next Story