ಲಂಚ್ ಬಾಕ್ಸ್ ತೊಳೆಯುವ ಬಗ್ಗೆ ಜಗಳವಾಡಿದ ಪೈಲಟ್-ಸಿಬ್ಬಂದಿ
ಒಂದು ತಾಸು ವಿಳಂಬವಾದ ವಿಮಾನ ಹಾರಾಟ
ನವದೆಹಲಿ : ಏರ್ ಇಂಡಿಯಾ ವಿಮಾನದ ಪೈಲಟ್ ಹಾಗೂ ಸಿಬ್ಬಂದಿಯೊಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ವಿಮಾನ ಒಂದು ತಾಸಿಗೂ ಅಧಿಕ ವಿಳಂಬವಾಗಿ ಹಾರಾಟ ನಡೆಸಿದ ನಂತರ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ. ವಿಮಾನ ಬೆಂಗಳೂರಿನಿಂದ ದಿಲ್ಲಿಗೆ ಹೊರಡಲು ಇನ್ನೇನು ಎರಡೇ ನಿಮಿಷಗಳಿವೆ ಎನ್ನುವಾಗ ತನ್ನ ಲಂಚ್ ಬಾಕ್ಸ್ ತೊಳೆಯುವಂತೆ ವಿಮಾನದ ಪೈಲಟ್ ಸಿಬ್ಬಂದಿಗೆ ಹೇಳಿದ್ದೇ ಈ ಜಗಳಕ್ಕೆ ಕಾರಣವೆನ್ನಲಾಗಿದೆ.
ಇಂತಹ ಒಂದು ಘಟನೆ ನಡೆದಿದ್ದನ್ನು ಏರ್ ಇಂಡಿಯಾ ದೃಢೀಕರಿಸಿದ್ದು ತನಿಖೆ ನಡೆಯುತ್ತಿದೆ ಎಂದಿದೆ. ಇಬ್ಬರು ಸಿಬ್ಬಂದಿಗಳನ್ನೂ ವಿಚಾರಣೆಗಾಗಿ ಬರ ಹೇಳಲಾಗಿದೆ. ಘಟನೆಯ ಕುರಿತಂತೆ ಡಿಜಿಸಿಎಗೂ ಮಾಹಿತಿ ನೀಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
Next Story