varthabharthi

ರಾಷ್ಟ್ರೀಯ

ತೆಲಂಗಾಣದಲ್ಲಿ ಟ್ರಂಪ್ ಪ್ರತಿಮೆ ಸ್ಥಾಪಿಸಿ ಪೂಜಿಸುತ್ತಿರುವ ಆರಾಧಕ

ವಾರ್ತಾ ಭಾರತಿ : 19 Jun, 2019

 ಹೈದರಾಬಾದ್,ಜೂ.19: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಪ್ರಬಲ ನಾಯಕತ್ವ ’ಮತ್ತು ‘ದಿಟ್ಟ ನಿಲುವು’ಗಳನ್ನು ಮೆಚ್ಚಿಕೊಂಡಿರುವ ತೆಲಂಗಾಣದ ಅಭಿಮಾನಿಯೋರ್ವ ತನ್ನ ಮನೆಯಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿ ಅವರನ್ನು ದೇವರಂತೆ ಪೂಜಿಸುತ್ತಿದ್ದಾನೆ.

 ಅತ್ತ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧಿತ ವಿವಾದಗಳು ಕಾವು ಪಡೆದುಕೊಂಡಿದ್ದರೆ ಇತ್ತ ಜನಗಾಂವ್ ಜಿಲ್ಲೆಯ ಕೊನ್ನೆ ಗ್ರಾಮದ ಕೃಷಿಕ ಬುಸಾ ಕೃಷ್ಣ(32) ಅವರು ಮನೆಯಲ್ಲಿ ಟ್ರಂಪ್ ವಿಗ್ರಹ ಸ್ಥಾಪಿಸಿದ್ದಾರೆ. ಪ್ರತಿದಿನ ಅದಕ್ಕೆ ಕುಂಕುಮವನ್ನು ಹಚ್ಚಿ,ಹೂಮಾಲೆಗಳನ್ನು ಹಾಕಿ ಅಭಿಷೇಕ ಮತ್ತು ಆರತಿಗಳನ್ನು ಮಾಡುತ್ತಿದ್ದಾರೆ. ಜೊತೆಗೆ ‘ಜೈ ಜೈ ಟ್ರಂಪ್’ಮಂತ್ರವನ್ನೂ ಹೇಳುತ್ತಾರೆ.

ಎಂದಾದರೂ ಒಂದು ದಿನ ಟ್ರಂಪ್ ಅವರನ್ನು ಭೇಟಿಯಾಗಲು ಬಯಸಿರುವುದಾಗಿ ಕೃಷ್ಣ ಹೇಳಿಕೊಂಡಿದ್ದಾರೆ.

 ಕೃಷ್ಣ ಪ್ರತಿಮೆ ಸ್ಥಾಪನೆಗಾಗಿ 1.3 ಲ.ರೂ.ಗಳನ್ನು ವೆಚ್ಚ ಮಾಡಿದ್ದಾರೆ,ಜೊತೆಗೆ ಗ್ರಾಮಸ್ಥರಿಗೆ ಊಟವನ್ನೂ ಹಾಕಿದ್ದಾರೆ ಎಂದು ಅವರ ತಾಯಿ ಸುದ್ದಿಗಾರರಿಗೆ ತಿಳಿಸಿದರು.

ಜೂ.14ರಂದು ಟ್ರಂಪ್ ತನ್ನ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಾಗ ಅವರಿಗೆ ಶುಭಾಶಯಗಳನ್ನು ಕೋರಿ ಕೃಷ್ಣ ತನ್ನ ಮನೆಯ ಹೊರಗೆ ಪೋಸ್ಟರ್ ಅಂಟಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)