varthabharthi

ರಾಷ್ಟ್ರೀಯ

ಅತ್ಯಾಚಾರಕ್ಕೆ ಯತ್ನಿಸಿ ಒಂಭತ್ತು ತಿಂಗಳ ಹಸುಳೆಯನ್ನು ಕೊಂದ ರಾಕ್ಷಸ!

ವಾರ್ತಾ ಭಾರತಿ : 19 Jun, 2019

ವಾರಂಗಲ್(ತೆಲಂಗಾಣ),ಜೂ.19: ಒಂಭತ್ತು ತಿಂಗಳ ಹೆಣ್ಣುಮಗುವಿನ ಮೇಲೆ ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿದ್ದ ಎನ್ನಲಾಗಿರುವ ವ್ಯಕ್ತಿಯೋರ್ವ ಅದನ್ನು ಉಸಿರುಗಟ್ಟಿಸಿ ಸಾಯಿಸಿರುವ ರಾಕ್ಷಸೀಯ ಘಟನೆ ಬುಧವಾರ ಇಲ್ಲಿ ನಡೆದಿದೆ.

   ಹೆತ್ತವರು ಮಗುವಿನೊಂದಿಗೆ ಮಲಗಿದ್ದು,ನೆರೆಕರೆಯ ನಿವಾಸಿ,ವೃತ್ತಿಯಲ್ಲಿ ಕೂಲಿಕಾರ್ಮಿಕನಾಗಿರುವ 28ರ ಹರೆಯದ ಆರೋಪಿ ಬೆಳಗಿನ ಜಾವ ಮಗುವನ್ನು ಟೆರೇಸ್‌ಗೊಯ್ದು ಆಕೆಯ ಮೇಲೆ ಲೈಂಗಿಕ ಹಲ್ಲೆಯನ್ನು ನಡೆಸಿದ್ದಾನೆ. ಮಗು ಅಳತೊಡಗಿದಾಗ ಆರೋಪಿ ಅದರ ಬಾಯಿಯನ್ನು ಮುಚ್ಚಿಸಲು ಪ್ರಯತ್ನಿಸಿದಂತಿದೆ,ಪರಿಣಾಮವಾಗಿ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮಗು ನಾಪತ್ತೆಯಾಗಿದ್ದರಿಂದ ಕಂಗಾಲಾದ ಹೆತ್ತವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದಾಗ ಮಗು ಆತನ ಬಳಿಯಲ್ಲಿಯೇ ಇತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ಅದು ಮೃತಪಟ್ಟಿತ್ತು.

ಆರೋಪಿಯನ್ನು ಬಂಧಿಸಲಾಗಿದೆ. ಮಗುವಿನ ಸಾವಿಗೆ ನಿಖರ ಕಾರಣ ಮತ್ತು ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತೇ ಎನ್ನುವುದು ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)