varthabharthi

ಕ್ರೀಡೆ

ವೇಗವಾಗಿ 8,000 ರನ್ ಪೂರೈಸಿದ 2ನೇ ದಾಂಡಿಗ ಅಮ್ಲ

ವಾರ್ತಾ ಭಾರತಿ : 19 Jun, 2019

ಬರ್ಮಿಂಗ್‌ಹ್ಯಾಮ್, ಜೂ.19: ದಕ್ಷಿಣ ಆಫ್ರಿಕದ ಆರಂಭಿಕ ಆಟಗಾರ ಹಾಶಿಮ್ ಅಮ್ಲ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ವೇಗವಾಗಿ 8,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಲೀಗ್ ಪಂದ್ಯದ ವೇಳೆ ಅಮ್ಲ ಈ ಮೈಲುಗಲ್ಲು ತಲುಪಿದರು.

ವೃತ್ತಿಜೀವನದ 38ನೇ ಅರ್ಧಶತಕ ಪೂರೈಸಿದ ಅಮ್ಲ ತನ್ನ 176ನೇ ಇನಿಂಗ್ಸ್‌ನಲ್ಲಿ 8,000 ರನ್ ಪೂರೈಸಿದರು. 175 ಇನಿಂಗ್ಸ್‌ಗಳಲ್ಲಿ 8 ಸಾವಿರ ರನ್ ಪೂರೈಸಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಕಡಿಮೆ ಇನಿಂಗ್ಸ್‌ನಲ್ಲಿ 8 ಸಾವಿರ ಮೈಲುಗಲ್ಲು ತಲುಪಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

83 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 55 ರನ್ ಗಳಿಸಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದ ಅಮ್ಲ ಟೂರ್ನಿಯಲ್ಲಿ ಮೊದಲ ಬಾರಿ ಅರ್ಧಶತಕ ಸಿಡಿಸಿದರು.

ಕಡಿಮೆ ಇನಿಂಗ್ಸ್‌ಗಳಲ್ಲಿ 8,000 ರನ್ ಪೂರೈಸಿದ ಆಟಗಾರರು

175- ವಿರಾಟ್ ಕೊಹ್ಲಿ

176-ಹಾಶಿಮ್ ಅಮ್ಲ

182-ಎಬಿ ಡಿವಿಲಿಯರ್ಸ್

200-ಸೌರವ್ ಗಂಗುಲಿ/ರೋಹಿತ್ ಶರ್ಮಾ

203-ರಾಸ್ ಟೇಲರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)