varthabharthi

ಅಂತಾರಾಷ್ಟ್ರೀಯ

ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲಿ ದಯಾಮರಣ ಜಾರಿ

ವಾರ್ತಾ ಭಾರತಿ : 19 Jun, 2019

ಮೆಲ್ಬರ್ನ್, ಜೂ. 19: ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯವು ಬುಧವಾರ ದಯಾಮರಣ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನು ಜಾರಿಗೆ ಬಂದ ದೇಶದ ಮೊದಲ ರಾಜ್ಯ ಇದಾಗಿದೆ.

ಈ ಕಾನೂನಿನ ಪ್ರಕಾರ, ಅಸಾಧ್ಯ ನೋವಿನಿಂದ ನರಳುತ್ತಿರುವ, ಚೇತರಿಸಿಕೊಳ್ಳುವ ಸಾಧ್ಯತೆಯಿರದ ರೋಗಿಗಳು ಮಾರಕ ಔಷಧಿಗಳನ್ನು ಕೊಟ್ಟು ತಮ್ಮ ಜೀವಗಳನ್ನು ಕೊನೆಗೊಳಿಸುವಂತೆ ತಮ್ಮ ವೈದ್ಯರನ್ನು ಕೋರಬಹುದಾಗಿದೆ.

ಸಹಿಸಲಾಗದ ನೋವಿನಿಂದ ಬಳಲುತ್ತಿರುವ ಹಾಗೂ 6 ತಿಂಗಳಿಗೂ ಕಡಿಮೆ ಕಾಲ ಬದುಕಲಿರುವ ಅಥವಾ 12 ತಿಂಗಳಿನಿಂದ ನರ ದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿರುವ, ಚೇತರಿಸಿಕೊಳ್ಳಲು ಸಾಧ್ಯವಿರದ ರೋಗಿಗಳು ದಯಾಮರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ದಯಾಮರಣಕ್ಕಾಗಿ 68 ಸುರಕ್ಷತಾ ಕ್ರಮಗಳನ್ನು ರೂಪಿಸಲಾಗಿದ್ದು ರೋಗಿಗಳು ಅವುಗಳನ್ನು ಪೂರೈಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)