ಮಂಗಳೂರು ವಿವಿ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟ
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಎಪ್ರಿಲ್/ಮೇ 2019ರಲ್ಲಿ ನಡೆಸಿದ ಎಲ್ಲಾ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಜೂ.18ರ ಅಪರಾಹ್ನದಿಂದ ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಪ್ರಕಟಿಸಲಾಗಿದೆ.
ಮರುಮೌಲ್ಯಮಾಪನ, ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅರ್ಜಿಯನ್ನು ಜೂ.29ರೊಳಗಾಗಿ ಫಲಿತಾಂಶದ ವೆಬ್ಸೈಟ್ ಪ್ರತಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ಮಂಗಳೂರು ವಿವಿಯ ಪ್ರಕಟನೆ ತಿಳಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 83,196 ವಿದ್ಯಾರ್ಥಿಗಳ ಪೈಕಿ 66,062 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Next Story