varthabharthi

ಕರಾವಳಿ

ಮೂಡುಬಿದಿರೆ: ನಿಯಂತ್ರಣ ತಪ್ಪಿ ಶಾಲಾ ಆವರಣ ಗೋಡೆಗೆ ಢಿಕ್ಕಿಯಾದ ಕಾರು

ವಾರ್ತಾ ಭಾರತಿ : 19 Jun, 2019

ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಶಾಲಾ ಆವರಣ ಗೋಡೆಗೆ ಢಿಕ್ಕಿಯಾಗಿ ಎರಡು ಬೈಕುಗಳಿಗೆ ಹಾಗೂ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಢಿಕ್ಕಿಯಾದ ಘಟನೆ ಬೆಳುವಾಯಿ ಬ್ಲೋಸಂ ಶಾಲೆಯ ಬಳಿ ಬುಧವಾರ ಸಂಭವಿಸಿದೆ. 

ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ. 

ಕಾರ್ಕಳ ಕಡೆಯಿಂದ ಮೂಡುಬಿದಿರೆಗೆ ವೇಗವಾಗಿ ಬರುತ್ತಿದ್ದ ಕಾರು ಬೆಳುವಾಯಿ ಬ್ಲೋಸಂ ಶಾಲೆಯ ಬಳಿ ನಿಯಂತ್ರಣ ಕಳೆದುಕೊಂಡು ಎಡಗಡೆ ರಸ್ತೆ ಬಳಿ ಆವರಣ ಗೋಡೆಗೆ ಢಿಕ್ಕಿಯಾಗಿದೆ. ನಂತರ ಎರಡು ಬೈಕ್‍ಗಳಿಗೆ ಗುದ್ದಿ ಮುಂದುವರಿದು ಹತ್ತಿರದಲ್ಲಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಢಿಕ್ಕಿಹೊಡೆದಿದೆ. ಅಫಘಾತದಲ್ಲಿ ರಸ್ತೆ ಬಳಿ ಇದ್ದ ಮೆಸ್ಕಾಂ ಲೈನ್ ಮ್ಯಾನ್ ಅವರ ಮತ್ತು ಇನ್ನೋರ್ವರ ಬೈಕ್ ನಜ್ಜುಗುಜ್ಜಾಗಿದೆ.

ಈ ಬಗ್ಗೆ ಮೆಸ್ಕಾಂ ಇಲಾಖೆಯಿಂದ ಮೂಡುಬಿದಿರೆ ಪೊಲೀಸ್‍ ಠಾಣೆಗೆ ದೂರು ನೀಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)