varthabharthi

ವಿಶೇಷ-ವರದಿಗಳು

21 ಮಿಲಿಯನ್ ವೀವ್ಸ್ ಪಡೆದ ಬೆಳ್ಳುಳ್ಳಿಯ ವಿಡಿಯೋ!

ವಾರ್ತಾ ಭಾರತಿ : 20 Jun, 2019

ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಎಷ್ಟು ಕಷ್ಟವೆಂದು ಅದನ್ನು ಸುಲಿದವರಿಗೇ ಗೊತ್ತು. ಬಹಳಷ್ಟು ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲಿದ್ದರೆ ಅದಕ್ಕೆ ಸಾಕಷ್ಟು ತಾಳ್ಮೆಯೂ ಅಗತ್ಯ.

ಪ್ರಾಯಶಃ ಇದೇ ಕಾರಣದಿಂದಾಗಿ ಇತ್ತೀಚೆಗೆ ಒಬ್ಬ ಟ್ವಿಟ್ಟರಿಗ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಸುಲಭ ವಿಧಾನದ ಬಗ್ಗೆ ವೀಡಿಯೋವೊಂದನ್ನು ಮಾಡಿದ ಪೋಸ್ಟ್ ಅನ್ನು 2.1 ಕೋಟಿ ಜನರು ವೀಕ್ಷಿಸಿ ಅದನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರಲ್ಲದೆ, ಈ ವೀಡಿಯೋ ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ.

“ಸಾಕಷ್ಟು ಕೊರಿಯನ್ ಆಹಾರ ತಯಾರಿಸುವ ನನಗೆ  ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಅತ್ಯುತ್ತಮ ವಿಧಾನವಿದು'' ಎಂಬ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳ್ಳುಳ್ಳಿ ಎಸಳಿನ ಮಧ್ಯ ಭಾಗದಲ್ಲಿ ಚೂರಿಯನ್ನು ತೂರಿಸಿ ಚಾಣಾಕ್ಷತೆಯಿಂದ ಹಾಗೂ ಸುಲಭವಾಗಿ ಸಿಪ್ಪೆ ತೆಗೆಯಬಹುದೆಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)