varthabharthi

ನಿಮ್ಮ ಅಂಕಣ

ವೈದ್ಯರ ನಡೆ ಸರಿಯೇ?

ವಾರ್ತಾ ಭಾರತಿ : 21 Jun, 2019
-ಬಾಷಿತ್ ಕೆಮ್ಮಾರ, ಉಪ್ಪಿನಂಗಡಿ

ಮಾನ್ಯರೇ,

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯರು ನಡೆಸಿದ ಮುಷ್ಕರಗಳು ಖಂಡಿತ ಸಮರ್ಥನೀಯವಲ್ಲ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಂತಹ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 72 ಮಕ್ಕಳು ಪ್ರಾಣ ಕಳೆದುಕೊಂಡದ್ದು, ಹೈದರಾಬಾದ್ ಮೂಲದ ಸ್ತ್ರೀರೋಗ ತಜ್ಞೆ ಪಾಯಲ್ ತಡ್ವಿ ಕೊಲೆ ಪ್ರಕರಣ ಮತ್ತು ಮಕ್ಕಳ ತಜ್ಞ ಡಾ.ಕಪೀಲ್ ಖಾನ್ ಬಂಧನ ಪ್ರಕರಣ ಇವೆಲ್ಲ ಪ್ರಕರಣಗಳು ಮುಷ್ಕರ ಮಾಡಲು ಭಾರತೀಯ ವೈದ್ಯಕೀಯ ಸಂಘಕ್ಕೆ ಕಾಣಸಿಗದಿರುವುದು ಸಂಘದ ದ್ವಂದ್ವ ನಿಲುವಿಗೆ ಹಿಡಿದ ಕೈಗನ್ನಡಿಯಾಗಿದೆ.

-ಬಾಷಿತ್ ಕೆಮ್ಮಾರ, ಉಪ್ಪಿನಂಗಡಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)