varthabharthi

ಸಿನಿಮಾ

ಈ ಶ್ರೇಷ್ಠ ನಟ, ಸೂಪರ್ ಸ್ಟಾರ್ ಯಾರು ಹೇಳಿ ?

ವಾರ್ತಾ ಭಾರತಿ : 21 Jun, 2019

ಅಮಿತಾಭ್ ಬಚ್ಚನ್ ರನ್ನು ಸುಮ್ಮನೆ ಯಾರೂ ಬಿಗ್ ಬಿ ಎಂದು ಕರೆಯುವುದಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂದು ಹೇಳಿದ ಹಾಗೆ ಅಮಿತಾಭ್ ನಿರ್ವಹಿಸದ ಪಾತ್ರ ಯಾವುದಾದರೂ ಇದೆಯೇ ? 'ಪಾ' ಚಿತ್ರದಲ್ಲಿ ಅಮಿತಾಭ್ ಯಾವ ಪರಿ ಬದಲಾಗಿದ್ದರೆಂದರೆ ಅವರ ಪರಿಚಯ ಹಿಡಿಯುವದೇ ಅಸಾಧ್ಯ ಎಂಬಷ್ಟರ ಮಟ್ಟಿಗೆ. ಪಾತ್ರದಲ್ಲಿ ಅವರಂತೆ ತಲ್ಲೀನರಾಗುವ ನಟರು ಬಹಳ ವಿರಳ . 

ಇದೀಗ ಅಮಿತಾಭ್ ಅವರ ಇನ್ನೊಂದು ಪಾತ್ರ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಶೂಜಿತ್ ಸರ್ಕಾರ್ ಅವರ 'ಗುಲಾಬೋ ಸೀತಾಬೊ' ಚಿತ್ರದ ಅಮಿತಾಭ್ ಪಾತ್ರದ ಚಿತ್ರವನ್ನು ಎಂದು ವಿಮರ್ಶಕ ತರಣ್ ಆದರ್ಶ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಇದು ಅಮಿತಾಭ್ ಎಂದು ಪರಿಚಯ ಸಿಗಲು ಸಾಕಷ್ಟು ಹೊತ್ತು ತಗಲುವಷ್ಟು ಅವರು ಅಲ್ಲಿ ಬದಲಾಗಿದ್ದಾರೆ. ಹೈ ಪವರ್ ಕನ್ನಡಕ , ಉದ್ದ ಗಡ್ಡಧಾರಿ ಲುಕ್ ಇರುವ ಅಮಿತಾಭ್ ಪಾತ್ರ ಈವರೆಗಿನ ಅವರು ನಿರ್ವಹಿಸಿದ ಪಾತ್ರಗಳಲ್ಲೇ ಅತ್ಯಂತ ವಿಭಿನ್ನವಾದುದು ಎಂದು ಖಚಿತವಾಗಿ ಹೇಳಬಹುದು. 

ಈ ಚಿತ್ರದಲ್ಲಿ ಅಯುಷ್ಮಾನ್ ಖುರಾನಾ ಕೂಡ ನಟಿಸುತ್ತಿದ್ದು ರೋನಿ ಸ್ಕ್ರೂವಾಲ ನಿರ್ಮಿಸುತ್ತಿದ್ದಾರೆ. ಅಮಿತಾಭ್ ಪಾತ್ರ ಕ್ಕೆ ಸಾಮಾಜಿಕ ಜಾಲತಾಣ ಫಿದಾ ಆಗಿದ್ದು ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)