varthabharthi

ನಿಮ್ಮ ಅಂಕಣ

ಪ್ರಜಾಪ್ರಭುತ್ವ ಹಗಲು ಬೆಳಕಿನಲ್ಲಿ ಕೂಡ ಸಾಯಬಲ್ಲದು

ವಾರ್ತಾ ಭಾರತಿ : 21 Jun, 2019
ಕೃಷ್ಣ ಪ್ರಸಾದ್

ಪತ್ರಿಕಾ ಜಗತ್ತಿನಲ್ಲಿ ‘‘ನನ್ನ ಪರವಾಗಿ ಅಥವಾ ನನ್ನ ವಿರುದ್ಧವಾಗಿ’’ ಎಂಬ ಒಂದು ವ್ಯವಸ್ಥೆಯ ಸಂಧಾನ ನಡೆಸುವಲ್ಲಿ ‘ಪ್ರಧಾನ್ ಸೇವಕ್’ ಮೋದಿಯವರು ಎಷ್ಟು ಸುಲಲಿತವಾಗಿ, ಸುಲಭವಾಗಿ ಕೆಲಸ ಮಾಡುತ್ತಿದ್ದರು ಎಂಬುದು ನಮ್ಮನ್ನು ದಿಗ್ಮೂಢಗೊಳಿಸುವ ವಿಷಯ ಮತ್ತು ಇದು ಮುಕ್ತ ಪತ್ರಿಕೆಗಳ ಮಿತಿಗಳೇನೆಂಬ ಬಗ್ಗೆ ನಮಗೆ ಸ್ಪಷ್ಟವಾಗಿ ಮನವರಿಕೆ ಮಾಡಿಸುತ್ತದೆ. ‘‘ಪ್ರಜಾಪ್ರಭುತ್ವ ಅಂಧಕಾರದಲ್ಲಿ ಸಾಯುತ್ತದೆ’’ ಎಂಬುದು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಧ್ಯೇಯ ವಾಕ್ಯ. ಇಲ್ಲಿ ಅದು ಹಗಲು ಬೆಳಕಿನಲ್ಲೇ ಸಾವನ್ನಪ್ಪಿತು ಅನ್ನಿಸುತ್ತದೆ.


 ಕೃಪೆ: www.thehindu.com

ಟಿವಿ, ಕಂಪ್ಯೂಟರ್ ಮಾನಿಟರ್‌ಯುಗದಲ್ಲಿ ಸೌಜನ್ಯವು ಮಾಧ್ಯಮಗಳ ಒಂದು ಗುಣವಲ್ಲ. ಬಳಕೆದಾರರಿಂದ ಅದಕ್ಕೆ ಬೇಡಿಕೆಯೂ ಇಲ್ಲ, ಮಾಧ್ಯಮ ಮಂದಿಯಿಂದ ಬೇಡಿಕೆಯ ಪೂರೈಕೆಯೂ ಇಲ್ಲ. ಮನಸ್ಸಿನ ಮಾರುಕಟ್ಟೆಯಲ್ಲಿ ಮಾನಸಿಕ ಸಮತೋಲನವನ್ನು ಸಾಧಿಸಲಾಗಿದೆ. ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರ ‘ಮೂಕವಿಸ್ಮಿತಗೊಳಿಸುವ’ ಚುನಾವಣಾ ಗೆಲುವನ್ನು ಒಂದು ಅದ್ದೂರಿಯ ಕಥಾನಕವಾಗಿ ಹೆಣೆದಿವೆ. ಆದರೆ ಜಂಭಕೊಚ್ಚಿಕೊಳ್ಳುವ ಅದೇ ವಿದ್ಯುನ್ಮಾನ ಹಾಗೂ ಟಿಜಿಟಲ್ ವಾರ್ತಾ ಮಾಧ್ಯಮಗಳು, ಭಾರತವು ಬಲಪಂಥೀಯ ವಾದದೆಡೆಗೆ ವಾಲುವುದರಲ್ಲಿ ತಾವು ವಹಿಸಿದ ಮಹತ್ವ ಪೂರ್ಣ ಪಾತ್ರವನ್ನು ಸೌಜನ್ಯಪೂರ್ವಕವಾಗಿ ಒಪ್ಪಿಕೊಳ್ಳುತ್ತಿಲ್ಲ ಎಂಬುದನ್ನು ಪ್ರಜ್ಞಾವಂತರು ಗಮನಿಸದೆ ಇರಬಾರದು.

ಕೋಣೆಯಲ್ಲಿ ಆನೆ
ಚುನಾವಣೆಗಳಲ್ಲಿ ಎಲ್ಲ ತರ್ಕಗಳನ್ನೂ ಮೀರಿದ ಭಾರತೀಯ ಜನತಾ ಪಕ್ಷದ ಗೆಲುವನ್ನು ವಿವರಿಸಲು ಅದೆಷ್ಟೇ ನಮೂನೆಯ ವಿವರಣೆಗಳನ್ನು ನೀಡಿದರೂ, ಕೋಣೆಯೊಳಗೇ ಇರುವ ಆನೆಯನ್ನು ಉಪೇಕ್ಷಿಸಲು ಸಾಧ್ಯವೇ ಇಲ್ಲ: ಜನರ ಕಣ್ಣುಗಳಾಗಿ ಮತ್ತು ಕಿವಿಗಳಾಗಿ ತಾನು ವಹಿಸಬೇಕಾಗಿದ್ದ ಪಾತ್ರವನ್ನು ವಹಿಸದಿದ್ದ ವಾರ್ತಾ ಮಾಧ್ಯಮದ ಒಂದು ದೊಡ್ಡ ಮತ್ತು ಪ್ರಭಾವಶಾಲಿಯಾದ ಭಾಗವು ಆಳ್ವಿಕೆ ನಡೆಸುತ್ತಿದ್ದ ಸಿದ್ಧಾಂತದ ಮುಖವಾಣಿಯಾಗಿ ವರ್ತಿಸಿತು. ತರ್ಕಹೀನವಾಗಿ ಯಾವುದೇ ಪ್ರಶ್ನೆಗಳನ್ನು ಕೇಳದೆ ಆಳರಸರ ಸಿದ್ಧಾಂತದ ಪ್ರತಿಪಾದಕನಾಗಿ ನಿಂತ ಅದೇ ಮಾಧ್ಯಮಗಳು, ಈಗ ಭಾರತದ ಭಾವೀ ಭವಿಷ್ಯದಲ್ಲಿ ಒಂದು ಜಾತ್ಯತೀತ, ಉದಾರವಾದಿ ಪ್ರಜಾಪ್ರಭುತ್ವದ ಕುರಿತು ಬಡಾಯಿ ಕೊಚ್ಚುತ್ತ ವಿಪಕ್ಷಗಳಿಗೆ ಬೇಕಾ ಬಿಟ್ಟಿಯಾಗಿ ಸಲಹೆಗಳನ್ನು ನೀಡುತ್ತಿವೆ. ಇದೊಂದು ಪ್ರಹಸನವಲ್ಲದೆ ಬೇರೇನೂ ಅಲ್ಲ.

ಮಾಧ್ಯಮದವರ ಮುಖ್ಯ ಕೆಲಸಗಳೆಂದರೆ ವೀಕ್ಷಿಸುವುದು, ಪರೀಕ್ಷಿಸುವುದು, ಶೋಧಿಸುವುದು, ವಿಚಾರಿಸುವುದು ಮತ್ತು ಅರ್ಥವನ್ನು ಗ್ರಹಿಸುವುದು. ಇದನ್ನು ಮರೆಯುವಂತೆ ಮಾಡಿರುವ ಮೋದಿಯವರಿಗೆ ಪತ್ರಕರ್ತರ ಬಗ್ಗೆ ಇರುವ ತಿರಸ್ಕಾರದ ಹೊರತಾಗಿಯೂ ಮಾಧ್ಯಮವು ‘ಗುಜರಾತ್ ಮಾದರಿ’ಯ ಬಗ್ಗೆ ಒಪ್ಪಿಗೆಯನ್ನು, ಮೆಚ್ಚುಗೆಯನ್ನು ಸೃಷ್ಟಿಸುವುದರಲ್ಲಿ ಒಂದು ಮುಖ್ಯ ಅಸ್ತ್ರವಾಗಿತ್ತು. ಬಲಿಷ್ಠ ಮಾಧ್ಯಮ ಸಂಸ್ಥೆಗಳನ್ನು, ಅವುಗಳ ಪ್ರತಿಸ್ಪರ್ಧಿಗಳಿಗೆ ಬೆಂಬಲ/ಪೋಷಣೆ ನೀಡುವ ಮೂಲಕ, ಪಳಗಿಸಲಾಯಿತು. ಕಿರಿಕಿರಿ, ತಕರಾರು ಮಾಡುವ ಸಂಪಾದಕರನ್ನು ಹದಗೊಳಿಸಲಾಯಿತು, ತಹಬಂದಿಗೆ ತರಲಾಯಿತು; ಅಥವಾ ಅವರ ಮಾಲಕರು ಅವರನ್ನು ಬೆದರಿಸಿ ಮೆತ್ತಗೆ ಹೊರಗೆ ಕಳುಹಿಸಿದರು. ಮ್ಯಾನೇಜರ್‌ಗಳಿಗೆ ಸೂಕ್ತ ಸಂದೇಶ ಕಳುಹಿಸಲು ಜಾಹೀರಾತುಗಳನ್ನು ಆಗಾಗ್ಗೆ ತಡೆಹಿಡಿಯುವುದು ಮತ್ತೆ ನೀಡುವುದು ನಡೆಯಿತು.

ಇದೆಲ್ಲದರ ಪರಿಣಾಮ: 2014ರ ವೇಳೆಗಾಗುವಾಗ, ಬಾಹ್ಯವಾಗಿ ಬಲಾತ್ಕಾರ ಪೂರ್ವಕವಾಗಿ ಎಂದು ತೋರಿಸಿಕೊಳ್ಳದೆ, ಮೋದಿಯವರು ವೃತ್ತ ಪತ್ರಿಕೆಗಳ ಮುಖಪುಟದಲ್ಲಿ ದಪ್ಪ ಅಕ್ಷರಗಳ ಸುದ್ದಿಯಾಗುವುದರಲ್ಲಿ ಯಶಸ್ವಿಯಾದರು; ಗೌರವಾನ್ವಿತೆಯನ್ನು (ರೆಸ್ಪೆಕ್ಟೆಬಿಲಿಟಿ)ಗಳಿಸಿಕೊಂಡರು; ಮತ್ತು ಬೂರ್ಜ್ವಾ ವರ್ಗದ ಪ್ರಜ್ಞೆಯೊಳಗೆ ತನ್ನನ್ನು ಓರ್ವ ಬಡ, ಭ್ರಷ್ಟಗೊಳಿಸಲು ಸಾಧ್ಯವಿಲ್ಲದ, ಸುಧಾರಣಾವಾದಿ ಹಿಂದುತ್ವ ಐಕಾನ್ ಎಂದು ಪ್ರತಿಷ್ಠಾಪಿಸಿಕೊಂಡರು; ಉದಾರವಾದಿ ಇಂಗ್ಲಿಷ್ ಮೀಡಿಯಾಕ್ಕೆ ಬಲಿಪಶುವಾದ ಒಬ್ಬ ಮಣ್ಣಿನ ಮಗ ಎಂದು ಸ್ಥಾಪಿತವಾದರು. 2017ರಲ್ಲಿ ಗುಜರಾತ್‌ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳ ವೇಳೆ ಒಂದು ಬಿಜೆಪಿ ಟಿವಿ ಕಮರ್ಶಿಯಲ್ ಮೋದಿ ಯಂತ್ರವು ಮೀಡಿಯಾವನ್ನು ಏನೆಂದು ತಿಳಿದಿದೆ, ಪರಿಗಣಿಸಿದೆ ಎಂಬುದನ್ನು ಅಚಾತುರ್ಯದಿಂದ ಜ್ಞಾಪಿಸಿತು. ಆ ಕಮರ್ಶಿಯಲ್‌ನಲ್ಲಿ ಇಬ್ಬರು ಯುವಕರು ಕ್ಷೌರಿಕನ ಅಂಗಡಿಯೊಂದರಲ್ಲಿ ಮೋದಿಯವರ ಕುರಿತು ಚರ್ಚಿಸುತ್ತಿರುತ್ತಾರೆ. ಆ ಇಬ್ಬರಲ್ಲಿ ಒಬ್ಬ ಅವರನ್ನು ಒಬ್ಬ ‘‘ಸರ್ವಾಧಿಕಾರಿ’’ ಎಂದು ಕರೆಯುತ್ತಾನೆ ಮತ್ತು ಅವರು ತಮಗೆ ತುಂಬ ಕಿರುಕುಳ ನೀಡಿದ್ದಾರೆ ಎನ್ನುತ್ತಾನೆ. ಆ ಇಬ್ಬರು ಯುವಕರ ಸಂಭಾಷಣೆಯನ್ನು ಆಲಿಸುತ್ತಾ ತನ್ನ ಸರದಿಗಾಗಿ ಕಾಯುತ್ತ ಕುಳಿತಿರುವ ಮೂರನೆಯ ವ್ಯಕ್ತಿಯೋರ್ವ ನಡುವೆ ಬಾಯಿ ಹಾಕಿ ‘‘ನಿಮ್ಮನ್ನು ನೋಡಿದರೆ ನೀವು ಪತ್ರಿಕಾ ವರದಿಗಾರರ ಹಾಗೆ ಕಾಣಿಸುತ್ತೀರಿ’’ ಎನ್ನುತ್ತಾನೆ. ತಾನು ‘ವಿಕಾಸ್’ ಎಂದು ಪರಿಚಯಿಸಿಕೊಳ್ಳುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪತ್ರಿಕೋದ್ಯಮ ಅಂದರೆ ಪ್ರಶ್ನೆಗಳನ್ನು ಕೇಳುವುದು, ಟೀಕಿಸುವುದು, ಒಂದು ವಿಷಯವನ್ನು ಕೆದಕಿ ಶೋಧಿಸುವುದು, ಬಹಿರಂಗಪಡಿಸುವುದು ಸರಕಾರದ ಅದ್ದೂರಿಯ ಪ್ರಾಜೆಕ್ಟ್‌ಗೆ ಒಂದು ತಡೆಗೋಡೆ.

ಇದು ಮೀಡಿಯಾ ವಿರೋಧಿಯಾದ ಒಂದು ಮನಸ್ಥಿತಿಯನ್ನು, ಮೈಂಡ್‌ಸೆಟ್ ಅನ್ನು ಹೇಗೆ ಬೆಳೆಸಲಾಗಿದೆ ಎಂಬುದನ್ನು ತೋರಿಸುತ್ತದೆ. ಬೆಳೆಸಿದ್ದು (ಕಲ್ಟಿವೇಟ್) ಯಾಕೆಂದರೆ, ‘ಪ್ರಚಾರಕ್’ ಆಗಿದ್ದ ಮೋದಿಯವರು 1990ರ ದಶಕದಲ್ಲಿ ಹಲವು ಸಂದರ್ಗಳಲ್ಲಿ ಅಹ್ಮದಾಬಾದ್‌ನಲ್ಲಿ ವಾರ್ತಾಪತ್ರಿಕಾ ಕಚೇರಿಗಳ ಹೊರಗಡೆ ಮಧ್ಯರಾತ್ರಿ ಕಳೆದ ತನಕವೂ ರಾಜಕೀಯ ವಿಷಯದಲ್ಲಿ ಉಪಯೋಗವಾಗುವ ಪತ್ರಕರ್ತರ ಜೊತೆ ಒಂದು ಕಪ್ ಚಹಾ ಕುಡಿಯುವುದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದರು. ಪತ್ರಿಕಾ ಜಗತ್ತಿನಲ್ಲಿ ‘‘ನನ್ನ ಪರವಾಗಿ ಅಥವಾ ನನ್ನ ವಿರುದ್ಧವಾಗಿ’’ ಎಂಬ ಒಂದು ವ್ಯವಸ್ಥೆಯ ಸಂಧಾನ ನಡೆಸುವಲ್ಲಿ ‘ಪ್ರಧಾನ್ ಸೇವಕ್’ ಮೋದಿಯವರು ಎಷ್ಟು ಸುಲಲಿತವಾಗಿ, ಸುಲಭವಾಗಿ ಕೆಲಸ ಮಾಡುತ್ತಿದ್ದರು ಎಂಬುದು ನಮ್ಮನ್ನು ದಿಗ್ಮೂಢಗೊಳಿಸುವ ವಿಷಯ ಮತ್ತು ಇದು ಮುಕ್ತ ಪತ್ರಿಕೆಗಳ ಮಿತಿಗಳೇನೆಂಬ ಬಗ್ಗೆ ನಮಗೆ ಸ್ಪಷ್ಟವಾಗಿ ಮನವರಿಕೆ ಮಾಡಿಸುತ್ತದೆ. ‘‘ಪ್ರಜಾಪ್ರಭುತ್ವ ಅಂಧಕಾರದಲ್ಲಿ ಸಾಯುತ್ತದೆ’’ ಎಂಬುದು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಧ್ಯೇಯ ವಾಕ್ಯ. ಇಲ್ಲಿ ಅದು ಹಗಲು ಬೆಳಕಿನಲ್ಲೇ ಸಾವನ್ನಪ್ಪಿತು ಅನ್ನಿಸುತ್ತದೆ.

ಉತ್ತರ ಮತ್ತು ದಕ್ಷಿಣ ಅಮೆರಿಕದಿಂದ (ಡೊನಾಲ್ಡ್ ಟ್ರಂಪ್, ಜೈರ್ ಬೊಲ್ಸೊನಾರೊ) ಪಶ್ಚಿಮ ಮತ್ತು ಪೂರ್ವ ಏಶ್ಯಾದ(ರಿಸೆಪ್ ತಯ್ಯಿಪ್ ಎರ್ದೊಗನ್, ರೊಡ್ರಿಗೊ ಡುಟರ್ಟ್) ವರೆಗೆ, 21ನೇ ಶತಮಾನದ ರಾಷ್ಟ್ರೀಯವಾದಿ ರಾಜಕಾರಣಿ ಮಾಡಬೇಕಾದ ಕೆಲಸಗಳ ಯಾದಿ ಒಂದೇ ತೆರನಾಗಿದೆ: (ಎ) ಮಾಧ್ಯಮವನ್ನು ‘‘ಜನತೆಯ ಶತ್ರು’’ ಎಂದು ನಿಂದಿಸಿ ಜನರು ಅದರ ವಿರುದ್ಧ ತಿರುಗಿ ಬೀಳುವಂತೆ ಮಾಡುವುದು; (ಬಿ) ಮೀಡಿಯಾವನ್ನು ನ್ಯೂಸ್ ಟ್ರೇಡರ್‌ಗಳು, ‘ಪ್ರೆಸ್ಟಿಟ್ಯೂಟ್’ ಎಂದು ಕರೆದು ಅವುಗಳನ್ನು ಅಕ್ರಮಗೊಳಿಸುವುದು; (ಸಿ) ಮೀಡಿಯಾಕ್ಕಿರುವ ಅವಕಾಶವನ್ನು ಸೀಮಿತಗೊಳಿಸಿ ಅದರ ಉಸಿರುಗಟ್ಟಿಸುವುದು; (ಡಿ) ಕರಾಳ ಶಾಸನಗಳ ಮೂಲಕ ಮೀಡಿಯಾಕ್ಕೆ ಬೆದರಿಕೆ ಹಾಕುವುದು; (ಇ) ಏಕಮುಖ ರೇಡಿಯೋ ಭಾಷಣಗಳು ಮತ್ತು ಸಾಮಾಜಿಕ ಮೀಡಿಯಾವನ್ನು ಬಳಸುವ ಮೂಲಕ ಸಾಂಪ್ರದಾಯಿಕ ಮೀಡಿಯಾವನ್ನು ಬದಿಗೆ ತಳ್ಳಿ ಬಿಡುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)