varthabharthi


ನಿಧನ

ಆಸಿಯಾ

ವಾರ್ತಾ ಭಾರತಿ : 22 Jun, 2019

ಉಡುಪಿ, ಜೂ.22: ತೋನ್ಸೆಯ ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಗೋವಾದ ಮತ್ಸೋದ್ಯಮಿ ಎಂ.ಇಸ್ಮಾಯಿಲ್ ಸಾಹೇಬ್ ಅವರ ಪತ್ನಿ ಆಸಿಯಾ(55) ಅಲ್ಪಕಾಲದ ಅಸೌಖ್ಯದಿಂದ ಜೂ.22 ರಂದು ಅಪರಾಹ್ನ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಗೋವಾದ ಪ್ರಸಿದ್ದ ಉದ್ಯಮಿ ದಿವಂಗತ ಹಾಜಿ ಕೆ.ಉಸ್ಮಾನ್ ಸಾಹೇಬರ ಪುತ್ರಿಯಾಗಿದ್ದ ಆಸಿಯಾ, ತನ್ನ ಪತಿಯ ಸಮಾಜ ಸೇವಾ ಕಾರ್ಯಗಳಿಗೆ ಸದಾ ಬೆಂಬಲಿಗರಾಗಿದ್ದರು. ಮೃತರು ಪತಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ರಾತ್ರಿ ಹೂಡೆಯ ಖದೀಮ್ ಜಾಮೀಯ ಮಸೀದಿಯಲ್ಲಿ ನೆರವೇರಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)