varthabharthi


ಗಲ್ಫ್ ಸುದ್ದಿ

ದುಬೈ: ಕೆ ಎಸ್ ಸಿ ಸಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ

ವಾರ್ತಾ ಭಾರತಿ : 22 Jun, 2019

ದುಬೈ : ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ದುಬೈ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಹಕಾರದೊಂದಿಗೆ ದುಬೈ ಹೆಲ್ತ್ ಅಥಾರಿಟಿ ಆ್ಯಂಡ್ ಕಮ್ಯೂನಿಟಿ ಡೆವೆಲೊಪ್ಮೆಂಟ್ ಅಥಾರಿಟಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ನಡೆಯಿತು.

ರಕ್ತ ದಾನ ಶಿಬಿರದಲ್ಲಿ ಒಟ್ಟು 142 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ದುಬೈ ಯ ಲತೀಫಾ ಹಾಸ್ಪಿಟಲ್ ನ ಬ್ಲಡ್ ಡೊನೇಷನ್ ಸೆಂಟರ್  ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಕೆ ಎಸ್ ಸಿ ಸಿ ಅಧ್ಯಕ್ಷ  ಮೊಹಮ್ಮದ್ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಖಜಾಂಚಿ ಮೊಹಮ್ಮದ್ ಫರಾಝ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಸಿರಾಜುದ್ದೀನ್ ಪರ್ಲಡ್ಕ, ಶಾಫಿ ಮಾಣಿ, ಮೆಹತಾಬ್ ಕೈಕಂಬ, ಇರ್ಝಾನ್ ಅಡ್ಡೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)