varthabharthi

ಸಿನಿಮಾ

200 ಕೋಟಿ ರೂ. ಗಳಿಸಿದ 'ಭಾರತ್'

ವಾರ್ತಾ ಭಾರತಿ : 23 Jun, 2019

ಈವರ್ಷ ಈದುಲ್‌ಫಿತ್ರ್ ಸಂದರ್ಭದಲ್ಲಿ ಬಿಡುಗಡೆ ಯಾದ ಸಲ್ಮಾನ್‌ಖಾನ್ ಅಭಿನಯದ ಭಾರತ್, ಬಾಕ್ಸ್‌ಆಫೀಸ್‌ನಲ್ಲಿ ಜಯಭೇರಿ ಬಾರಿಸಿದೆ. ಎರಡೇ ವಾರಗಳಲ್ಲಿ 200 ಕೋಟಿ ರೂ. ಗಳಿಸಿರುವ ಭಾರತ್, ದೇಶವಿದೇಶಗಳ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಹಿನ್ನೆಲೆಯಲ್ಲಿ ಭಾರತ್‌ನ ಗಳಿಕೆ ಕುಸಿಯುವ ಸಾಧ್ಯತೆಯಿದೆಯೆಂದು ಚಿತ್ರರಂಗದ ಮಂದಿ ಊಹಿಸಿದ್ದರು. ಆದರೆ ಅವೆಲ್ಲವನ್ನೂ ಹುಸಿಗೊಳಿಸಿ ಭಾರತ್ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಬಾಲಿವುಡ್‌ನಲ್ಲಿ ಕಳೆದ ಎರಡು ವಾರಗಳಲ್ಲಿ ಯಾವುದೇ ಪ್ರಮುಖ ಚಿತ್ರಗಳು ಬಿಡುಗಡೆಯಾಗದಿರುವುದು ಕೂಡಾ ಭಾರತ್‌ಗೆ ವರದಾನವಾಗಿ ಪರಿಣಮಿಸಿದೆ. ಅಲಿ ಅಬ್ಬಾಸ್ ಝಫರ್ ನಿರ್ದೇಶನದ ಭಾರತ್, ಕೊರಿಯನ್ ಚಿತ್ರ ‘ಒಡೆ ಟು ಮೈ ಫಾದರ್’ ಚಿತ್ರದ ರಿಮೇಕ್ ಆಗಿದೆ. ಶ್ರೀಸಾಮಾನ್ಯನೊಬ್ಬನ ಬದುಕಿನ ಪಯಣದ ಮೂಲಕ ಭಾರತದ ಇತಿಹಾಸವನ್ನು ಈ ಚಿತ್ರವು ಪ್ರತಿಬಿಂಬಿಸಿದೆ. ಕತ್ರಿನಾ ಕೈಫ್, ಸುನೀಲ್ ಗ್ರೋವರ್, ಜಾಕಿ ಶ್ರಾಫ್,ಟಬು,ಸತೀಶ್ ಕೌಶಿಕ್ ಹಾಗೂ ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)