varthabharthi

ಸಿನಿಮಾ

ಕುತೂಹಲ ಕೆರಳಿಸಿರುವ 'ಮೆಂಟಲ್ ಹೈ ಕ್ಯಾ'

ವಾರ್ತಾ ಭಾರತಿ : 23 Jun, 2019

ಕ್ವೀನ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಪ್ರಕಾಶ್ ಕೊವೆಲಾಮುಡಿ ಅವರ ಚೊಚ್ಚಲ ನಿರ್ದೇಶನದ ಮೆಂಟಲ್ ಹೈ ಕ್ಯಾ ಚಿತ್ರಕ್ಕಾಗಿ ಕಂಗನಾ ರಾಣಾವತ್ ಹಾಗೂ ರಾಜ್‌ಕುಮಾರ್ ರಾವ್ ಮತ್ತೊಮ್ಮೆ ಜೊತೆಯಾಗಿ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೈಕಾಲಾಜಿಕಲ್ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಹಾಗೂ ಕಂಗನಾ ರಾಣಾವತ್ ಪರಸ್ಪರರ ಬಗ್ಗೆ ಅನುಮಾನ ತಾಳಿರುವ ನೆರೆಹೊರೆಯ ಯುವಕ, ಯುವತಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಮೆಂಟಲ್‌ಹೈ ಕ್ಯಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವುಂಟು ಮಾಡುವಲ್ಲಿ ಯಶಸ್ವಿಯಾಗಿದೆ.

ನಿರ್ದೇಶಕ ಪ್ರಕಾಶ್ ಕೊವೆಲಾಮುಡಿ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಚಿತ್ರದ ಕಥಾವಸ್ತುವಿನ ಬಗ್ಗೆ ಕಿರುಪರಿಚಯ ನೀಡಿದ್ದರು. ಚಿತ್ರದಲ್ಲಿ ಕಂಗನಾ ಪಾತ್ರವು ತನ್ನ ಸುತ್ತಲಿನ ಜಗತ್ತಿನ ಬಗ್ಗೆ ಸದಾ ಸಂದೇಹವನ್ನೇ ಹೊಂದಿರುತ್ತದೆ. ತನ್ನ ನೆರೆಯಾತ (ರಾಜ್‌ಕುಮಾರ್ ರಾವ್) ನ ಬದುಕಿನ ಬಗ್ಗೆ ಆಕೆ ನಿರಂತರವಾಗಿ ಸಂದೇಹವನ್ನು ಹೊಂದಿರುತ್ತಾಳೆ. ಆಕೆಯ ಈ ನಡವಳಿಕೆಯ ನೆರೆಯಾತನನ್ನು ಕೆರಳಿಸುತ್ತದೆ. ಅವರ ನಡುವಿನ ವಿರಸವು ಅನಿರೀಕ್ಷಿತ ತಿರುವನ್ನು ಪಡೆಯುತ್ತದೆ. ಶೋಭಾ ಕಪೂರ್, ಏಕತಾ ಕಪೂರ್ ಹಾಗೂ ಶೈಲೇಶ್ ಆರ್.ಸಿಂಗ್ ಜಂಟಿಯಾಗಿ ನಿರ್ಮಿಸಿರುವ ಮೆಂಟಲ್ ಹೈ ಕ್ಯಾ, ಜುಲೈನಲ್ಲಿ ತೆರೆಕಾಣಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)