varthabharthi

ಸಿನಿಮಾ

'ಪ್ರೀಮಿಯರ್ ಪದ್ಮಿನಿ'ಗೆ 50

ವಾರ್ತಾ ಭಾರತಿ : 23 Jun, 2019

ಸದಭಿರುಚಿಯ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆಂಬುದನ್ನು ಪ್ರೀಮಿಯರ್ ಪದ್ಮಿನಿ ಸಾಬೀತುಪಡಿಸಿದೆ. ಜಗ್ಗೇಶ್,ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್, ಮಧು ಅಭಿನಯದ ಈ ಚಿತ್ರ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.

ಎಪ್ರಿಲ್ 26ರಂದು ತೆರೆಕಂಡ ಪ್ರೀಮಿಯರ್ ಪದ್ಮಿನಿ, ಕೌಟುಂಬಿಕ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕವರ್ಗದ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು ಪ್ರೀಮಿಯರ್ ಪದ್ಮಿನಿಯನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ‘‘ಉತ್ತಮ ಚಿತ್ರಗಳನ್ನು ನಿರ್ಮಿಸಲು ಶಕ್ತಿ ಹಾಗೂ ಧೈರ್ಯವನ್ನು ತುಂಬಿರುವ ಎಲ್ಲರಿಗೂ ಕೃತಜ್ಞತೆಗಳು’’ ಎಂದು ಅವರು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಹೇಳಿದ್ದಾರೆ.

ಶ್ರುತಿ ನಾಯ್ಡು,ಇದೀಗ ಮೊದಲ ಬಾರಿಗೆ ನಿರ್ದೇಶಕಿಯಾಗುವ ಸಿದ್ಧತೆಯಲ್ಲಿದ್ದಾರೆ. ಸದ್ಯದಲ್ಲೇ ಅವರು ಕನ್ನಡ ಚಿತ್ರವೊಂದಕ್ಕೆ ಆ್ಯಕ್ಷನ್‌ಕಟ್ ಹೇಳಲಿದ್ದಾರೆ. ಪ್ರೀಮಿಯರ್ ಪದ್ಮಿನಿ ಬಿಡುಗಡೆಯಾದಾಗಿನಿಂದ ಪ್ರೇಕ್ಷಕರ ಹಾಗೂ ವಿಮರ್ಶಕರ ಮುಕ್ತಕಂಠದ ಪ್ರಶಂಸೆ ಗಿಟ್ಟಿಸಿಕೊಂಡಿದೆ.

 ರಮೇಶ್ ಇಂದಿರಾ ನಿರ್ದೇಶನದ ಪ್ರೀಮಿಯರ್ ಪದ್ಮಿನಿ ಈಗಲೂ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಪ್ರೀಮಿಯರ್ ಪದ್ಮಿನಿ ಚಿತ್ರದ ಗೆಲುವು ಕೂಡಾ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದಿರುವುದಂತೂ ನಿಜ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)