varthabharthi


ಗಲ್ಫ್ ಸುದ್ದಿ

ಜಿಝಾನ್ ಬೈಶ್ ವತಿಯಿಂದ ಕ್ರೀಡಾಕೂಟ: ಫ್ರೆಂಡ್ಸ್ ಮಂಗಳೂರು ಚಾಂಪಿಯನ್

ವಾರ್ತಾ ಭಾರತಿ : 24 Jun, 2019

ಜಿಝಾನ್: ಫ್ರೆಂಡ್ಸ್ ಮಂಗಳೂರು ಕ್ರಿಕೆಟರ್ಸ್ (ಜಿಝಾನ್ ಬೈಶ್) ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಫ್ರೆಂಡ್ಸ್ ಮಂಗಳೂರು ಕ್ರಿಕೆಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫ್ರೆಂಡ್ಸ್ ಮಂಗಳೂರು ಕ್ರಿಕೆಟರ್ಸ್ ಸೀಮಿತ ಓವರ್ ಗಳ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವನ್ನು ಆಯೋಜಿಸಿತ್ತು.

ಬೈಶ್ ಜಿಝಾನಿನ ಪ್ರತಿಷ್ಟಿತ 12 ತಂಡಗಳು ಭಾಗವಹಿಸಿದ ಈ ಪಂದ್ಯಾಕೂಟದಲ್ಲಿ ಆಯೋಜಕ ತಂಡವೇ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಫ್ರೆಂಡ್ಸ್ ಮಂಗಳೂರು ತಂಡವು ಫ್ರೆಂಡ್ಸ್ ಮಂಗಳೂರು ಬಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಫಯಾಝ್ ಕೃಷ್ಣಾಪುರ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಬಾಜನಾದರು. ಕ್ರೀಡಾಕೂಟದ ಉತ್ತಮ ಎಸೆತಗಾರ ಸಲಾಮ್ ಪೂಲಬೆ ಹಾಗು ಉತ್ತಮ ದಾಂಡಿಗ ಪ್ರಶಸ್ತಿಯು ವಾಸಿಂ ಕಾರ್ನಾಡ್  ಪಾಲಾಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನವಾಝ್ ಕೃಷ್ಣಾಪುರ ಸ್ವೀಕರಿಸಿದರು.

ಸಮಾರಂಭದಲ್ಲಿ ಫ್ಯಾಷನ್ ಪ್ಲಸ್ ಮೂಡಬಿದ್ರೆ, ಮೆಲ್ಟಿಂಗ್ ಪಾಯಿಂಟ್ ಕೃಷ್ಣಾಪುರ ಮತ್ತು ಅಲ್ ಫವಾದ್ ಜುಬೈಲ್ ಪ್ರಾಯೋಜಕತ್ವದ ನೂತನ ಕ್ರಿಕೆಟ್ ಸಮವಸ್ತ್ರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಲೋಗೊ ಅಳವಡಿಸಿದ  ಬ್ಲಡ್ ಡೋನರ್ಸ್ ಮಂಗಳೂರು ಇದರ ಅಡ್ಮಿನ್ ನೌಶಾದ್ ಕಲಂದರ್ ಕರ್ನಿರೆ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಝಕರಿಯ ವಳವೂರು, ಸಲೀಮ್ ಉಪ್ಪಿನಂಗಡಿ ಹಾಗು ನವಾಝ್ ಶಾಕೋ  ಉಪಸ್ಥಿತರಿದ್ದರು. ಯೂನುಸ್ ಕೃಷ್ಣಾಪುರ ಕಾರ್ಯಮ ನಿರೂಪಿಸಿ, ಅಷ್ಫಾಕ್ ಜೋಕಟ್ಟೆ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)