ಗುರುಪುರ, ಜೂ.25: ಇಲ್ಲಿನ ಅಲೈಗುಡ್ಡೆ ಅಹಲ್ಯಾವನ ನಿವಾಸಿ, ಮಾಣಿಬೆಟ್ಟುಗುತ್ತು ದಿ.ಜಯರಾಮ ಶೆಟ್ಟಿಯ ಪತ್ನಿ ಅಂಜಾರುಬೀಡು ಮನೋರಮಾ ಜೆ.ಶೆಟ್ಟಿ (78) ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಗುರುಪುರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್(ವಿನ್ನು) ಶೆಟ್ಟಿ ಸಹಿತ ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.