varthabharthi

ಅಂತಾರಾಷ್ಟ್ರೀಯ

ಚೆನ್ನೈಯಲ್ಲಿ ಹನಿ ನೀರಿಗೂ ಹಾಹಾಕಾರ: ಹಾಲಿವುಡ್ ನಟ ಡಿಕಾಪ್ರಿಯೋ ಆತಂಕ

ವಾರ್ತಾ ಭಾರತಿ : 26 Jun, 2019

ಹಾಲಿವುಡ್, ಜೂ.26: ಚೆನ್ನೈ ನಗರಕ್ಕೆ ನೀರುಣಿಸುವ ನಾಲ್ಕು ಪ್ರಮುಖ ಜಲಾಶಯಗಳೂ ಒಣಗಿ ಹೋಗಿ ನೀರಿಗೆ ತತ್ವಾರವೆದ್ದಿರುವ ವಿಚಾರ ಎಲ್ಲೆಡೆ ಅದೆಷ್ಟು ಸುದ್ದಿಯಾಗಿದೆಯೆಂದರೆ ಅದು ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೋ ಅವರ ಗಮನವನ್ನೂ ಸೆಳೆದಿದೆ.

ಸ್ವತಃ ಪರಿಸರಾಸಕ್ತರಾಗಿರುವ ಕಾಪ್ರಿಯೋ ಚೆನ್ನೈ ನಗರದ ನೀರಿನ ಬವಣೆ ಕುರಿತಂತೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಒಣಗಿ ಹೋಗಿರುವ ಬಾವಿಯ ಚಿತ್ರವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಅವರು ಜತೆಗೆ, “ಕೇವಲ ಮಳೆ ಮಾತ್ರ ಚೆನ್ನೈಯನ್ನು ಈ ಪರಿಸ್ಥಿತಿಯಿಂದ ರಕ್ಷಿಸಬಹುದು'' ಎಂಬ ಶೀರ್ಷಿಕೆಯ ಬಿಬಿಸಿ  ವರದಿಯೊಂದನ್ನೂ ಶೇರ್ ಮಾಡಿದ್ದಾರೆ.

ಸದ್ಯದಲ್ಲಿಯೇ ತಾಜ್ ಮಹಲ್ ಗಿಂತಲೂ ಎತ್ತರವಾಗಲಿದೆ ಎಂದು ತಿಳಿಯಲಾದ ಗಾಝಿಪುರ್ ತ್ಯಾಜ್ಯ ಗುಡ್ಡೆಯ ಕುರಿತಂತೆಯೂ ಕೆಲ ದಿನಗಳ ಹಿಂದೆ ಕಾಪ್ರಿಯೋ ತಮ್ಮ ಕಳವಳ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)