varthabharthi

ಕ್ರೀಡೆ

ಎರಡೂ ವಿಶ್ವಕಪ್ ಗಳ ಮೊದಲ 6 ಪಂದ್ಯಗಳ ಫಲಿತಾಂಶ ಒಂದೇ!

1992ರ ಇತಿಹಾಸ ಪುನರಾವರ್ತಿಸಲಿದೆಯೇ ಪಾಕ್?

ವಾರ್ತಾ ಭಾರತಿ : 26 Jun, 2019

ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನಕ್ಕಾಗಿ ಭಾರೀ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಈ ಪರಿಸ್ಥಿತಿಯಿಂದ ಪುಟಿದೆದ್ದು, ಈ ಬಾರಿ ವಿಶ್ವಕಪ್ ಗೆಲ್ಲುವುದೇ?... ಸದ್ಯದ ಅದರ ಆಟ ನೋಡಿದರೆ ಹಾಗೆ ಆಗುವ ಸಾಧ್ಯತೆ ತೀರಾ ಕಡಿಮೆ. ಆದರೆ ಪಾಕ್ ತಂಡ ವಿಶ್ವಕಪ್ ಗೆದ್ದ 1992ರ ವಿಶ್ವಕಪ್ ಹಾಗು ಈ ವಿಶ್ವಕಪ್ ಎರಡರಲ್ಲೂ ಮೊದಲ ಆರು ಪಂದ್ಯಗಳ ಫಲಿತಾಂಶ ಮಾತ್ರ ಒಂದೇ ರೀತಿ ಇದೆ!

ಮೊದಲ ಆರು ಪಂದ್ಯಗಳಲ್ಲಿ ಈ ಎರಡೂ ವಿಶ್ವಕಪ್ ಗಳಲ್ಲಿ ಎರಡು ಪಂದ್ಯಗಳನ್ನು ಪಾಕ್ ಗೆದ್ದಿದ್ದರೆ, ಮೂರರಲ್ಲಿ ಸೋತಿದೆ. ಒಂದರಲ್ಲಿ ಫಲಿತಾಂಶ ಬಂದಿಲ್ಲ. ಇಂದು ಪಾಕ್ ಏಳನೇ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡುತ್ತಿದೆ. 

ಅಲ್ಲೂ ಒಂದು ವಿಶೇಷವಿದೆ. 1992ರಲ್ಲೂ ಪಾಕ್ ವಿರುದ್ಧ ಆಡುವವರೆಗೂ ನ್ಯೂಝಿಲ್ಯಾಂಡ್ ಯಾವ ಪಂದ್ಯವನ್ನೂ ಸೋತಿರಲಿಲ್ಲ. ಈ ವಿಶ್ವಕಪ್ ನಲ್ಲೂ ಈವರೆಗೆ ಅದು ಅಜೇಯವಾಗಿದೆ. ಈ ಬಾರಿಯೂ ಪಾಕ್ ಮತ್ತೆ ಲಯಕ್ಕೆ ಮರಳಿ ಗೆಲುವಿನ ಹಾಡಿಗೆ ಬರಲಿದೆಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)