varthabharthi

ರಾಷ್ಟ್ರೀಯ

ಬಿಜೆಪಿ ಸೇರಿದ ಮಾಜಿ ಶಾಸಕ ಅಬ್ದುಲ್ಲಾಕುಟ್ಟಿ

ವಾರ್ತಾ ಭಾರತಿ : 26 Jun, 2019

ಹೊಸದಿಲ್ಲಿ, ಜೂ.26: ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಕೇರಳದ ಮಾಜಿ ಕಾಂಗ್ರೆಸ್ ಶಾಸಕ ಎಪಿ ಅಬ್ದುಲ್ಲಾ ಕುಟ್ಟಿ ಬಿಜೆಪಿಗೆ ಸೇರ್ಪಡೆಯಾದರು.

ಈ ಸಂದರ್ಭ ಕೇಂದ್ರ ಸಚಿವ ಮುರಳೀಧರನ್ ಮತ್ತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಉಪಸ್ಥಿತರಿದ್ದರು. ಬಿಜೆಪಿ ಸೇರ್ಪಡೆಗೂ ಮುನ್ನ ಸೋಮವಾರ ಅಬ್ದುಲ್ಲಾ ಕುಟ್ಟಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.

“ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳು ನಾನು ಬಿಜೆಪಿ ಸೇರುವಂತೆ ಪ್ರೇರೇಪಿಸಿದವು. ಮುಸ್ಲಿಮನಾಗಿ ದೇಶಪ್ರೇಮ ನನ್ನ ನಂಬಿಕೆಯ ಭಾಗ. ದಕ್ಷಿಣ ಭಾರತದಲ್ಲಿ ಮುಸ್ಲಿಮರು ಮತ್ತು ಬಿಜೆಪಿ ಸರಕಾರಗಳ ನಡುವೆ ಮಾನಸಿಕ ಏಕತೆಯನ್ನು ಸೃಷ್ಟಿಸಬೇಕಾಗಿದೆ. ನಾನು ಇದನ್ನೇ ಮಾಡುವ ಉದ್ದೇಶ ಹೊಂದಿದ್ದೇನೆ” ಎಂದವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)