varthabharthi

ನಿಮ್ಮ ಅಂಕಣ

ಮಾಹಿತಿ ನೀಡದೆ ಗ್ರಾಮ ವಾಸ್ತವ್ಯ ನಡೆಸಿ

ವಾರ್ತಾ ಭಾರತಿ : 30 Jun, 2019
ಸದ್ದಾಂಹುಸೇನ ಬಿ. ಬಳಗಾನೂರ ಗಣಿಹಾರ, ವಿಜಯಪುರ

ಮಾನ್ಯರೇ,

ಮುಖ್ಯಮಂತ್ರಿ, ಸಚಿವರು ಅಥವಾ ಯಾವುದೇ ಒಬ್ಬ ಸರಕಾರಿ ಅಧಿಕಾರಿಗಳು ಗ್ರಾಮ ವಾಸ್ತವ್ಯ ಅಥವಾ ಸ್ಥಳದ ಭೇಟಿಗಾಗಿ ಮಾಹಿತಿ ನೀಡದೆ ಬಂದರೆ ಆ ಸ್ಥಳದ ಅಥವಾ ಗ್ರಾಮದ ಹಿಂದೆ ಇದ್ದ ಪರಿಸ್ಥಿತಿಯ ಬಗ್ಗೆ ಗೊತ್ತಾಗುತ್ತದೆ. ಗ್ರಾಮ ವಾಸ್ತವ್ಯದ ಮಾಹಿತಿ ಗೊತ್ತಾಗುತ್ತಿದ್ದಂತೆ ಅಲ್ಲಿನ ಗ್ರಾಮ ಪಂಚಾಯತ್‌ನಿಂದ ಹಿಡಿದು ಸರಕಾರಿ ಅಧಿಕಾರಿಗಳು, ಶಾಸಕರು ಇನ್ನಿತರ ಸಿಬ್ಬಂದಿ ಎಚ್ಚೆತ್ತುಕೊಳ್ಳುತ್ತಾರೆ. ರಸ್ತೆಗಳು, ಚರಂಡಿಗಳು, ವಿದ್ಯುತ್ ದೀಪದ ಕಂಬಗಳು, ಗ್ರಾಮದ ಸುತ್ತಮುತ್ತಲಿನ ಸ್ವಚ್ಛತೆ ಕಾರ್ಯಗಳು, ಹೀಗೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಅಂದು ಮಾತ್ರ ಅಚ್ಚುಕಟ್ಟಾಗಿ ಮಾಡುತ್ತಾರೆ. ಇದೇ ಕಾರ್ಯಗಳನ್ನು ಮುಂಚೆಯೇ ಮಾಡಿದ್ದರೆ ಗ್ರಾಮದಲ್ಲಿ ಈ ಕಾರ್ಯಗಳಿಗೆ ಬರ ಇರುತ್ತಿರಲಿಲ್ಲ.

ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳು ಭೇಟಿ ನೀಡುವರೆಂದು ಅಂದು ಮಾತ್ರ ಮಾಡುವ ಅತೀ ದುಂದುವೆಚ್ಚದ ಕಾರ್ಯಗಳನ್ನು ಹಿಂದೆಯೇ ಮಾಡಲಾಗುವುದಿಲ್ಲವೇ? ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂನ್ 21ರಂದು ಯಾದಗಿರಿ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಅಲ್ಲಿ ಮಾಡಿರುವ ಖರ್ಚು ಅಂದಾಜು 1 ಕೋಟಿ ರೂಪಾಯಿಗೂ ಅಧಿಕವಿರಬಹುದು. ಈ ವೆಚ್ಚವನ್ನು ಗ್ರಾಮವಾಸ್ತವ್ಯ ಮಾಡುವ ಮೊದಲೇ ಗ್ರಾಮದಲ್ಲಿ ವಿವಿಧ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಬಹುದಿತ್ತಲ್ಲ? ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ, ಶಾಸಕರಾಗಲಿ ಅಥವಾ ಸರಕಾರಿ ಅಧಿಕಾರಿಗಳು ಮಾಹಿತಿ ಇಲ್ಲದೇ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಬೇಕು. ಇದರಿಂದ ಅಲ್ಲಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮಗೂ ಮಾಹಿತಿ ದೊರೆಯುತ್ತದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)