varthabharthi

ಸಿನಿಮಾ

ಲಾರ್ಡ್ಸ್ ಮೈದಾನದಲ್ಲಿ '83' ಶೂಟಿಂಗ್

ವಾರ್ತಾ ಭಾರತಿ : 7 Jul, 2019

1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಬೀಗಿದ ಕತೆಯನ್ನೇ ಸಿನೆಮಾ ಮಾಡಲಾಗುತ್ತಿದ್ದು ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಸಂಪೂರ್ಣಗೊಂಡಿದೆ. ಸದ್ಯ ಚಿತ್ರದ ಮುಖ್ಯ ಭಾಗವಾಗಿರುವ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ಬಾಕಿಯುಳಿದಿದ್ದು ಅದನ್ನು ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಸಲು ನಿರ್ದೇಶಕರು ನಿರ್ಧರಿಸಿ ದ್ದಾರೆ.

ಅದಕ್ಕಾಗಿ ಚಿತ್ರತಂಡ ಸದ್ಯ ನಡೆಯುತ್ತಿರುವ ವಿಶ್ವಕಪ್ ಮುಗಿಯುವುದನ್ನೇ ಕಾಯುತ್ತಿದೆ. ಜುಲೈಯಲ್ಲಿ ವಿಶ್ವಕಪ್ ಕೊನೆಯಾಗುತ್ತಿದ್ದಂತೆ ಕಬೀರ್ ಖಾನ್ ಅವರ ‘83’ ಚಿತ್ರ ತಂಡ ಲಾರ್ಡ್ಸ್‌ನಲ್ಲಿ ನೈಜ ಕ್ರಿಕೆಟ್ ಪಂದ್ಯವನ್ನು ಆಯೋಜಿ ಸಲಿದೆ. ‘83’ಯಲ್ಲಿ ದೀಪಿಕಾ ಪಡುಕೋಣೆ ಕಪಿಲ್ ದೇವ್ ಅವರ ಪತ್ನಿ ರೋಮಿಯ ಪಾತ್ರವನ್ನು ನಿಭಾಯಿಸುತ್ತಿದ್ದು ಆಕೆಯೂ ಲಾರ್ಡ್ಸ್‌ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. 1983ರಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲುತ್ತದೆ ಎಂದು ಭಾವಿಸಿ ರೋಮಿ ಪಂದ್ಯದ ಮಧ್ಯೆಯೇ ಎದ್ದು ಹೊರನಡೆದಿದ್ದರು. ಹಾಗೆ ಮಾಡುವಾಗ ಆಕೆ ತನ್ನ ಬಳಿಯಿದ್ದ ಪ್ರವೇಶ ಪತ್ರವನ್ನು ಬೇರೆಯವರಿಗೆ ನೀಡಿದ್ದ ಕಾರಣ ವೆಸ್ಟ್ ಇಂಡಿಸ್‌ನ ವಿಕೆಟ್‌ಗಳು ಉರುಳಲು ಆರಂಭಿಸಿದಾಗ ಕ್ರೀಡಾಂಗಣಕ್ಕೆ ಮರಳಲು ಬಯಸಿದರೂ ಸಾಧ್ಯವಾಗಿರಲಿಲ್ಲ.

ಇದಕ್ಕೂ ಮೊದಲು ಭಾರತ ಜಿಂಬಾಬ್ವೆ ವಿರುದ್ಧ ಆಡಿದ್ದ ಪಂದ್ಯವನ್ನು ಚಿತ್ರತಂಡ ಈಗಾಗಲೇ ಚಿತ್ರೀಕರಿಸಿದೆ. ಈ ಪಂದ್ಯದಲ್ಲಿ ಕಪಿಲ್ ದೇವ್ 138 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. 83 ಚಿತ್ರವು ಎಪ್ರಿಲ್ 2020ರಂದು ತೆರೆಗೆ ಬರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)