varthabharthi

ಸಿನಿಮಾ

ಗಾಳಿಪಟ-2 ಹಾರಿಸಲಿರುವ ಅದಿತಿ ಪ್ರಭುದೇವ

ವಾರ್ತಾ ಭಾರತಿ : 7 Jul, 2019

ನಿರ್ದೇಶಕ ಯೋಗರಾಜ್ ಭಟ್ ಅವರ ಮುಂದಿನ ಚಿತ್ರ ‘ಗಾಳಿಪಟ-2’ನ ತಾರಾ ಬಳಗ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗುತ್ತಿದೆ. ಸದ್ಯದ ಬೆಳವಣಿಗೆಯಲ್ಲಿ ಚಂದನವನದ ಸದ್ಯದ ಜನಪ್ರಿಯ ನಟಿ ಅದಿತಿ ಪ್ರಭುದೇವ ಭಟ್ರ ಜೊತೆ ಗಾಳಿಪಟ ಹಾರಿಸಲು ಸೇರಿಕೊಂಡಿದ್ದಾರೆ.

ಅದಿತಿ ಈಗಾಗಲೇ ಸಿಂಗ, ಅಪರೇಶನ್ ನಕ್ಷತ್ರಾ, ತೋತಾಪುರಿ ಮತ್ತು ರಂಗ ನಾಯಕಿ ಮುಂತಾದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಮಹೇಶ್ ದನಣ್ಣನವರ್ ನಿರ್ಮಾಣದ ‘ಗಾಳಿಪಟ-2’ ಯೋಗರಾಜ್ ಭಟ್ರ ಗಾಳಿಪಟ ಫ್ರಾಂಚೈಸಿಯ ಎರಡನೇ ಸಿನೆಮಾ ಎಂದು ಹೇಳಲಾಗುತ್ತಿದೆ.

ಈ ಚಿತ್ರದಲ್ಲಿ ಶರಣ್, ಪವನ್ ಕುಮಾರ್ ಮತ್ತು ರಿಶಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದರೆ ಅವರಿಗೆ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ ಮತ್ತು ಸೋನಲ್ ಮೊಂತೆರೊ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರು ಮುಖ್ಯ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಕೊರಿಯನ್ ಅಥವಾ ಚೀನಾ ಮೂಲದ ಓರ್ವ ನಟಿ ಹಾಗೂ ಪಶ್ಚಿಮ ಬಂಗಾಳದ ಓರ್ವ ನಟನೂ ‘ಗಾಳಿಪಟ-2’ನ ಭಾಗವಾಗಲಿದ್ದಾರೆ. ಬೆಂಗಳೂರು, ಮಂಡ್ಯ ಮತ್ತು ಧಾರವಾಡದ ಮೂರು ವಿಭಿನ್ನ ಹಿನ್ನೆಲೆಯ ಮೂವರು ಯುವಕರ ಜೀವನದ ಸುತ್ತ ಭಟ್ರು ಕತೆ ಹೆಣೆದಿದ್ದಾರೆ.

ಕರ್ನಾಟಕ ಮತ್ತು ಲಂಡನ್‌ನಲ್ಲಿ ಚಿತ್ರೀಕರಣ ಗೊಳ್ಳಲಿರುವ ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಲಿದ್ದಾರೆ. ಚಿತ್ರಕ್ಕೆ ಅದ್ವೈತ ಗುರು ಮೂರ್ತಿಯವರ ಛಾಯಾಗ್ರಹಣವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)