varthabharthi

ಕ್ರೀಡೆ

ಕ್ರಿಕೆಟ್ ವಿಶ್ವಕಪ್: ಭಾರತ-ನ್ಯೂಝಿಲ್ಯಾಂಡ್ ಸೆಮಿಫೈನಲ್ ಪಂದ್ಯಕ್ಕಿದೆ 2008ರ ಸಂಬಂಧ!

ವಾರ್ತಾ ಭಾರತಿ : 7 Jul, 2019

ಹೊಸದಿಲ್ಲಿ, ಜು.7: 2019ರ ಕ್ರಿಕೆಟ್ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಲ್ಲಿ ಭಾರತ-ನ್ಯೂಝಿಲ್ಯಾಂಡ್ ತಂಡ ಸೆಣಸಲಿದೆ. ಲೀಗ್ ಪಂದ್ಯದ ನಂತರ ಭಾರತ-ನ್ಯೂಝಿಲ್ಯಾಂಡ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಸೆಮಿಫೈನಲ್ ಗೆ 2008ರ ಪಂದ್ಯವೊಂದರ ಸಂಬಂಧವಿದೆ.

ಹೌದು… 2008ರ ಐಸಿಸಿ ಅಂಡರ್ 19 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಭಾರತ ಮತ್ತು ನ್ಯೂಝಿಲ್ಯಾಂಡ್ ಸೆಣಸಿದ್ದು, ಆಗ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದರೆ, ಕೇನ್ ವಿಲಿಯಮ್ಸನ್ ನ್ಯೂಝಿಲ್ಯಾಂಡ್ ತಂಡದ ನಾಯಕನಾಗಿದ್ದರು. ಈ ಬಾರಿಯೂ ಇವರಿಬ್ಬರೇ ಉಭಯ ತಂಡಗಳ ನಾಯಕರಾಗಿದ್ದಾರೆ.

2008ರ ಪಂದ್ಯದಲ್ಲಿ ಸೆಮಿಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ಭಾರತ ತಂಡದೆದುರು ಸೋಲನುಭವಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)