varthabharthiವೈವಿಧ್ಯ

‘ಡ್ರಗ್ಸ್ ಫ್ರೀ ಇಂಡಿಯಾ’ ಎಂದು?

ವಾರ್ತಾ ಭಾರತಿ : 8 Jul, 2019
ಮೂಲ: ಕಾತ್ಯಾಯಿನಿ ವಿದ್ಮಹೇ ಕನ್ನಡಕ್ಕೆ: ಕಸ್ತೂರಿ ಕೃಪೆ: ಆಂಧ್ರ ಜ್ಯೋತಿ

ಸ್ವತಂತ್ರ ಭಾರತದಲ್ಲಿ 1980ರಿಂದ ದೇಶದ ಗಡಿಗಳ ದಾಟಿ ಮಾದಕ ದ್ರವ್ಯಗಳ ಅಕ್ರಮ ಸಾಗಣೆ ಅಪಾಯಕರ ಮಟ್ಟದಲ್ಲಿ ಸಾಗುತ್ತಿದೆ. ಭಾರತ-ಪಾಕ್‌ಗಳಿಗೆ ಸಂಬಂಧಿಸಿದ 344 ಮೈಲುಗಳ ಸರಹದ್ದು ಮಾರ್ಗ ಪಂಜಾಬ್ ರಾಜ್ಯವನ್ನು ಒರೆಸಿಕೊಂಡು ಹೋಗುತ್ತದೆ. ಆ ಮಾರ್ಗದ ಮೂಲಕ ರವಾನೆ ಆಗುತ್ತಿರುವ ಮಾದಕ ದ್ರವ್ಯಗಳ ವ್ಯಾಪಾರದ ಮುಷ್ಟಿಯಲ್ಲಿ ಯುವಜನತೆ ಸಿಲುಕಿಕೊಂಡಿದೆ. ಪಂಜಾಬ್‌ನಲ್ಲಿ ಶೇ.75 ರಷ್ಟು ಯುವಜನತೆ ಈ ಜಾಲದಲ್ಲಿ ಬಿದ್ದಿದೆ.

ಮದ್ಯೋದ್ಯಮ, ಮಾದಕ ದ್ರವ್ಯಗಳ ವ್ಯಾಪಾರ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಆದಾಯ ಸಂಪನ್ಮೂಲಗಳು ಎಂದು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಅಧ್ಯಯನಗಳು ಹೇಳುತ್ತಿವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹತ್ತು ದೇಶಗಳಲ್ಲಿ ಜನಸಂಖ್ಯೆ ದೃಷ್ಟಿಯಿಂದ ಎರಡನೇ ಸ್ಥಾನದಲ್ಲೂ, ಬಡತನದಲ್ಲಿ ಮೊದಲ ಸ್ಥಾನದಲ್ಲೂ ಇರುವ ಭಾರತ ದೇಶ ಇವಕ್ಕೆ ಅತಿ ದೊಡ್ಡ ಮಾರ್ಕೆಟ್. ವಸಾಹತು ಆಡಳಿತದಲ್ಲಿ ಬ್ರಿಟನ್, ಚೀನಾಗಳಿಂದ ಟೀ, ಸಿಲ್ಕ್ ಕೊಂಡುಕೊಳ್ಳುವುದಕ್ಕೆ ಭಾರತ ದೇಶದ ಕಪ್ಪು ಮದ್ದಿನ ಮೇಲೇ ಆಧಾರಗೊಂಡಿತ್ತು. ಹಾಗಾಗಿಯೇ ಬ್ರಿಟಿಷರು ಭಾರತದಲ್ಲಿ ಕಪ್ಪು ಮದ್ದಿನ ಉತ್ಪತ್ತಿಗೆ, ಅಂತರ್‌ರಾಷ್ಟ್ರೀಯ ಮಾರಾಟಗಳಿಗೆ ದೊಡ್ಡ ವ್ಯವಸ್ಥೆಯನ್ನು ತಯಾರು ಮಾಡಿದರು. ಟಾಟಾ, ಬಿರ್ಲಾಗಳು , ಮಲ್ಯಗಳು ಅದರಲ್ಲಿ ಪಾಲುದಾರರಾಗಿ ಬೆಳೆದರು.
ಸ್ವತಂತ್ರ ಭಾರತದಲ್ಲಿ 1980ರಿಂದ ದೇಶದ ಗಡಿಗಳ ದಾಟಿ ಮಾದಕ ದ್ರವ್ಯಗಳ ಅಕ್ರಮ ಸಾಗಣೆ ಅಪಾಯಕರ ಮಟ್ಟದಲ್ಲಿ ಸಾಗುತ್ತಿದೆ. ಭಾರತ-ಪಾಕ್‌ಗಳಿಗೆ ಸಂಬಂಧಿಸಿದ 344 ಮೈಲುಗಳ ಸರಹದ್ದು ಮಾರ್ಗ ಪಂಜಾಬ್ ರಾಜ್ಯವನ್ನು ಒರೆಸಿಕೊಂಡು ಹೋಗುತ್ತದೆ. ಆ ಮಾರ್ಗದ ಮೂಲಕ ರವಾನೆ ಆಗುತ್ತಿರುವ ಮಾದಕ ದ್ರವ್ಯಗಳ ವ್ಯಾಪಾರದ ಮುಷ್ಟಿಯಲ್ಲಿ ಯುವಜನತೆ ಸಿಲುಕಿಕೊಂಡಿದೆ. ಪಂಜಾಬ್‌ನಲ್ಲಿ ಶೇ.75ರಷ್ಟು ಯುವಜನತೆ ಈ ಜಾಲದಲ್ಲಿ ಬಿದ್ದಿದೆ.
ಅಮೃತ್‌ಸರ್‌ನ ಹೊರಗೆ ಪಾಕಿಸ್ತಾನ ಸರಹದ್ದು ಗ್ರಾಮ ಮಕ್ಬುಲ್ ಪುರಾದಲ್ಲಿ ಡ್ರಗ್ಸ್ ವಿನಿಮಯ, ಅದರ ದುಷ್ಪರಿಣಾಮಗಳು ಯಾವ ಮಟ್ಟಕ್ಕೆ ಸೇರಿವೆ ಎಂದರೆ ಅದು ವಿಧೆವೆಯರ ನಿಲಯವಾಗಿ ಬದಲಾಗಿ ಹೋಗಿದೆ. ಇವನ್ನು ನಿಯಂತ್ರಿಸುವುದು ಲಕ್ಷ್ಯವಾಗಿ 1985ರಲ್ಲಿ ಭಾರತ ಸರಕಾರ ‘ದಿ ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೋ ಟ್ರಾಫಿಕ್ ಸಬ್‌ಸ್ಟನ್ಸ್ ಆ್ಯಕ್ಟ್’ ನ ಜೊತೆಗೆ ‘ಪ್ರಿವೆನ್ಸನ್ ಆಫ್ ಇಲ್ಲಿಸಿಟ್ ಟಾಫಿಕಿಂಗ್ ಇನ್ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರಾಫಿಕ್ ಸಬ್‌ಸ್ಟನ್ಸ್’ ಕಾನೂನು ಸಹ ಮಾಡಿತು. ಈ ಕಾನೂನು ಪ್ರಕಾರ ನಾರ್ಕೊಟಿಕ್ ಕಮೀಷನ್‌ಗೆ ಕಪ್ಪು ಮದ್ದು ಮತ್ತಿತರ ಮಾದಕ ದ್ರವ್ಯಗಳ ಉತ್ಪತ್ತಿ ವ್ಯಾಪಾರಗಳ ನಿಯಂತ್ರಣಾಧಿಕಾರ ಸಿಕ್ಕಿತು. ಮಾದಕ ದ್ರವ್ಯಗಳ ರವಾನೆ, ಉತ್ಪತ್ತಿ, ತಯಾರು ಮಾಡುವುದು, ಹತ್ತಿರ ಇರುವುದು ಭದ್ರಪಡಿಸುವುದು. ಮಾರಾಟ, ಖರೀದಿ, ಬೆಳೆಸುವುದು ಇವೆಲ್ಲಾ ಬೇಲ್ ಇಲ್ಲದ ಅಪರಾಧಗಳಾದವು. ಅಪರಾಧದ ಪ್ರಮಾಣ ಆಧರಿಸಿ ರೂ.10,000ದಿಂದ ಲಕ್ಷದವರೆಗೆ ಜುಲ್ಮಾನೆ ಒಂದು ವರ್ಷದಿಂದ ಇಪ್ಪತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸಲ್ಪಡುತ್ತದೆ. ಆದರೂ ಮಾದಕ ದ್ರವ್ಯಗಳ ವಿನಿಯೋಗ ಎಲ್ಲೂ ಕಡಿಮೆಯಾಗಿಲ್ಲ.
ಕೇರಳದಲ್ಲಿ ಸಹ ಈ ಸಮಸ್ಯೆ ತೀವ್ರವಾಗಿಯೇ ಇದೆ. ಗೋವಾ, ಮುಂಬೈಗಳಿಂದ ಸಿಂಥೆಟಿಕ್ ಡ್ರಗ್ಸ್, ತೆಲಂಗಾಣ ತಮಿಳು ಪ್ರಾಂತಗಳಿಂದ ಗಾಂಜಾ ಹೋಗುತ್ತದೆ. ಕೇರಳದಲ್ಲಿ ಮಾದಕ ದ್ರವ್ಯಗಳ ರಾಕೆಟ್‌ಗಳು ಪ್ರಧಾನವಾಗಿ ಯುವಜನರನ್ನು, ವಲಸೆ ಕಾರ್ಮಿಕರನ್ನು ಟಾರ್ಗೆಟ್ ಮಾಡಿಕೊಂಡು ಕೆಲಸ ಮಾಡುತ್ತಿವೆ. ಮುಂಬೈ, ಹೈದರಾಬಾದ್, ತಿರುಪತಿ ವಿಜಯವಾಡ, ವಿಶಾಖ ಪಟ್ಟಣಗಳಂಥ ದೊಡ್ಡ ನಗರಗಳಲ್ಲಿ ಮಾದಕ ದ್ರವ್ಯಗಳ ವಿನಿಯೋಗ ವಿಸ್ತರಿಸುತ್ತಿದೆ ಎಂದು 2010ರಲ್ಲೇ ಗುರುತಿಸಿದರು. ವಿಶಾಖಕ್ಕೆ ಆಫ್ರಿಕನ್ ದೇಶಗಳಿಂದ, ಮಾಲ್ಡೀವ್ಸ್‌ನಿಂದ ಶ್ರೀಲಂಕಾದಿಂದ ಮಾದಕ ದ್ರವ್ಯಗಳ ಅಕ್ರಮ ರವಾನೆ ನಡೆಯುತ್ತಿರುತ್ತದೆ. ಅಡವಿಗಳಿಗೆ ಸಮೀಪದಲ್ಲಿರುವ ಜನ ಅಕ್ರಮ ರವಾನೆಯಲ್ಲಿ ಭಾಗಿಗಳಾಗುತ್ತಾರೆ. ಆಂಧ್ರ ಪ್ರದೇಶದಲ್ಲಿ ಹದಿನಾರು ವರ್ಷದ ಮಕ್ಕಳಲ್ಲಿ ಶೇ.60ರಷ್ಟು ಮಂದಿ ಮಾದಕ ದ್ರವ್ಯಗಳಿಗೆ ಅಭ್ಯಸ್ತಗೊಂಡಿದ್ದಾರೆ. ತಂಬಾಕು, ಮದ್ಯ ಬಳಸುತ್ತಿರುವುದಾಗಿಯೂ ಪೊಲೀಸರ ಮಾಹಿತಿ. ಕೊಕೈನ್ ಹಂಚಿಕೆಗೆ ಹೈದರಾಬಾದ್ ಪ್ರಾಂತೀಯ ಹಬ್ ಆಗಿ ಬದಲಾಗಿದೆ. ಧೂಲ್ ಪೇಟ ಗಂಜಾಯ ಕೇಂದ್ರ ಕುಖ್ಯಾತವಾಗಿದೆ.


 2007ರಲ್ಲಿ ಪ್ರಯಾಸ್ ಎಂಬ ಎನ್‌ಜಿಒ, ಮಹಿಳಾ ಮಕ್ಕಳ ಕಲ್ಯಾಣ ಸಚಿವಾಲಯ ಸೇರಿ 13 ರಾಜ್ಯಗಳಲ್ಲಿ ಮಾಡಿದ ಸರ್ವೇ ಪ್ರಕಾರ ಮದ್ಯಕ್ಕೆ, ಮಾದಕ ದ್ರವ್ಯಗಳಿಗೆ ಅಭ್ಯಸ್ತಗೊಂಡ ಮಕ್ಕಳಲ್ಲಿ 18 ವರ್ಷಗಳ ಒಳಗಿನ ಮಕ್ಕಳು ಶೇ.32.1, 20 ವರ್ಷ ವಯಸ್ಸಿನ ಒಳಗಿನವರು ಶೇ.13.1 ಇದ್ದಾರೆ. ಹೆರಾಮನ್, ಕಪ್ಪು ಮದ್ದು, ಮದ್ಯ ಯಾವುದಾದರೇನು 20 ಮಿಲಿಯನ್ ಮಕ್ಕಳು ಅವಕ್ಕೆ ದಾಸರಾಗಿದ್ದಾರೆ. 2008ರ ಲೆಕ್ಕಗಳ ಪ್ರಕಾರ 12 ವರ್ಷದ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೊಕೈನ್‌ನಂಥ ಮಾದಕ ದ್ರವ್ಯಗಳ ಬಳಸುವವರ ಸಂಖ್ಯೆ 5.3 ಮಿಲಿಯನ್‌ಗಳು, ಒಂದು ಎನ್‌ಜಿಒ ಮಾಡಿದ ಸರ್ವೇ ಪ್ರಕಾರ ಮಾದಕ ದ್ರವ್ಯಗಳ ಅಭ್ಯಾಸದಿಂದ ವಿಮುಕ್ತಿ ಚಿಕಿತ್ಸೆಗೆ ಬರುವವರಲ್ಲಿ ಶೇ.63.6 ವರ್ಷದೊಳಗಿನವರೇ. ಬಾರದೆ ಉಳಿದು ಹೋದವರನ್ನು ಕುರಿತು ಊಹಿಸಿದರೆ ಒಟ್ಟಿನ ಮೇಲೆ ಯುವಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ಮಾದಕ ವ್ಯಾಪಾರಗಳ ವಿಕೃತಿ ಅರ್ಥ ಆಗುತ್ತದೆ. 2017ರಲ್ಲಿ ಸೋಷಿಯಲ್ ಜಸ್ಟಿಸ್ ಆ್ಯಂಡ್ ಎಂಪವರ್ ಮೆಂಟ್ ಸಚಿವಾಲಯ, ಸೇವ್‌ದಿ ಚಿಲ್ಡ್ರನ್ ಎಂಬ ಎನ್‌ಜಿಓ, ಬಿಡಿ ಬಿಡಿಯಾಗಿ ಮಾಡಿದ ಸರ್ವೇಗಳ ಪ್ರಕಾರ ದಿಲ್ಲಿಯಲ್ಲಿ 50,923 ಮಂದಿ ಬೀದಿ ಮಕ್ಕಳಲ್ಲಿ 46,410 ಮಂದಿ ಮಾದಕ ದ್ರವ್ಯಗಳ ಬಳಸುತ್ತಿರುವುದಾಗಿ ತಿಳಿದುಬಂದಿದೆ.
ಬಚ್‌ಪನ್ ಬಚಾವೋ ಎಂಬ ಎನ್‌ಜಿಒ ಪರವಾಗಿ ನೊಬೆಲ್ ವಿಜೇತ್ ಕೈಲಾಷ್ ಸತ್ಯಾರ್ಥಿ ಹಾಕಿದ ಪಿಟಿಶನ್ ಮೇಲೆ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್ 2016ರಲ್ಲಿ ಮಕ್ಕಳಲ್ಲಿ ಮಾದಕ ದ್ರವ್ಯಗಳನ್ನು ನಿಯಂತ್ರಿಸುವುದಕ್ಕೆ ಒಂದು ರಾಷ್ಟ್ರೀಯ ಆಚರಣಾ ಯೋಜನೆ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶ ಕೊಟ್ಟಿತು. ಅದರ ಪರಿಣಾಮವೇ The National plan for drug demand reduction 
(2018-2023) ಜಾಗೃತಿಗೊಳಿಸುವುದು, ಅಭ್ಯಾಸವನ್ನು ಬಿಡಿಸುವುದು, ಪುನರ್ವಸತಿ ಕಲ್ಪಿಸುವುದು ಎಂದ ಮೂರು ಕೋನಗಳಲ್ಲಿ ಕೆಲಸ ಮಾಡುವುದು, ಸ್ಥಳೀಯ ಸರಕಾರಿ ಆಡಳಿತ ಸಂಸ್ಥೆಗಳ ಪ್ರಮುಖರನ್ನು, ಪ್ರಜಾ ಸಮೂಹಗಳನ್ನು ಪಾಲುದಾರರನ್ನಾಗಿ ಮಾಡುವುದು, ಸಾಮಾಜಿಕ, ಸಾಂಸ್ಕೃತಿಕ ಕಾರ್ಯ ಕಲಾಪಗಳಲ್ಲಿ ಯುವ ಜನರ ಪಾತ್ರಗಳನ್ನು ಪ್ರೋತ್ಸಾಹಿಸುವುದರಂಥ ಗುರಿಗಳು ಇದಕ್ಕೆ ಇವೆ. ಅವು ಆಚರಣೆಗೆ ಹೇಗೆ ಅನುವಾದಗಳಾಗುತ್ತವೆ ಎನ್ನುವುದೇ ಪ್ರಶ್ನೆ. ಮಾದಕ ದ್ರವ್ಯಗಳ ಬಳಕೆ ಹೆಚ್ಚುತ್ತಿರುವಾಗ ಅಪರಾಧೀ ವ್ಯವಸ್ಥೆ ಬಗ್ಗೆ ಲಕ್ಷ ಇದೆಯಾ? ಕಳ್ಳತನಗಳು, ಗ್ಯಾಂಗ್‌ವಾರ್‌ಗಳು, ಹತ್ಯೆಗಳು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು, ಅಕ್ರಮ ರವಾಣಾದಲ್ಲಿ ಪಾಲುದಾರಿಕೆ, ಅಕ್ರಮ ಆದಾಯ ಇತ್ಯಾದಿಗಳ ಕಥೆ ಏನು? ರಾತ್ರಿ ಜೀವನವನ್ನು ಮಾದಕ ಪದಾರ್ಥಗಳೊಂದಿಗೆ, ಸಂಗೀತದೊಂದಿಗೆ ಕ್ಷಣಿಕಾಕರ್ಷಣೆಯ ವ್ಯಾಪಾರವಾಗಿ ಬದಲಿಸಿದ ಪಬ್‌ಗಳಿಗೆ, ರೇವ್ ಪಾರ್ಟಿಗಳಿಗೆ, ಗೋವಾ ಪಾರ್ಟಿಗಳಿಗೆ ಬಂಡವಾಳಗಳು ಯಾರವು? ಪೋಷಕರು ಯಾರು? ಮಾದಕ ದ್ರವ್ಯಗಳ ಅಕ್ರಮ ರವಾನೆಗೆ ಬೆಂಬಲವಾಗಿ ಇರುವ ಶಕ್ತಿಗಳಾವವು?ಅದನ್ನು ಮುಟ್ಟಬಲ್ಲ ಸತ್ತಾ ಆಗಲೀ, ಆಸಕ್ತಿ ಆಗಲೀ ಇಲ್ಲದ ಸರಕಾರಗಳು ಏನೆಂದು ಉತ್ತರ ಹೇಳಬಲ್ಲವು! ವಿಶ್ವಸಂಸ್ಥೆಯ ಕರೆಯನ್ನು ಅನುಸರಿಸಿ ಜೂನ್ 26ರನ್ನು ‘ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನೋತ್ಸವ’ ಎಂದು ಆಚರಿಸಿದರೆ ಆಯ್ತೆ ? ಮಾದಕ ದ್ರವ್ಯಗಳ ವಿನಿಮಯದಲ್ಲಿ ಹಾನಿಕರ ಪರಿಣಾಮಗಳ ಕುರಿತು ಹೇಳಿ ಅವುಗಳತ್ತ ವಿಮುಖತೆಯನ್ನು ಬೆಳೆಸಬೇಕು. ನಮ್ಮ ಬದುಕುಗಳನ್ನು, ನಮ್ಮ ಸಮುದಾಯಗಳನ್ನು ನಮ್ಮ ವ್ಯಕ್ತಿತ್ವಗಳನ್ನು ಮಾದಕ ದ್ರವ್ಯ ರಹಿತವಾಗಿ ಅಭಿವೃದ್ಧಿ ಮಾಡಿಕೊಳ್ಳೊಣ ಎಂದು ಹಿತೋಪದೇಶ ಮಾಡಬೇಕು.
ಆದರೆ, ಈ ಎಲ್ಲವೂ ಮಾದಕ ದ್ರವ್ಯಗಳ ಬೇಡಿಕೆಯನ್ನು ತಗ್ಗಿಸುವ ದಿಕ್ಕಿಗೆ ಪ್ರಯತ್ನವೇ ಹೊರತು ಸಪ್ಲೈನ ಸಂಭೋದಿಸಿದ ಸಂದರ್ಭವೇ ಇಲ್ಲ. ಬೇಡಿಕೆ ಇಲ್ಲದೆ ಹೋದರೆ ಸಪ್ಲೈ ತನಗೆ ತಾನೆ ಕಡಿಮೆಯಾಗುತ್ತದೆ ಎಂಬ ಧೋರಣೆ ಇದು. ಡಿಮ್ಯಾಂಡ್ ಮಾಡುತ್ತಿದೆ ಎಂದು ಪ್ರಜೆಗಳನ್ನು ದೂರುವುದೆ ಇದರಲ್ಲಿನ ನಿಜಾಂಶ. ಯುವಜನರನ್ನು ನಿರ್ವೀರ್ಯಗೊಳಿಸುತ್ತಿರುವ, ದೇಶದ್ರೋಹಿಗಳೆಂದೂ, ಮನುಕುಲ ದ್ರೋಹಿಗಳೆಂದು ಗುರುತಿಸಿ ಶಿಕ್ಷಿಸಲ್ಪಡಬೇಕಾದವರೂ ಮಾದಕ ದ್ರವ್ಯಗಳ ವ್ಯಾಪಾರಿಗಳು. ಅದನ್ನು ಜಾಣತನದಿಂದ ಮರೆತು ಡಿಮ್ಯಾಂಡ್ ತಗ್ಗಿಸದೇ ಸಪ್ಲೈ ನಿರ್ವಹಿಸುವುದು ಕಷ್ಟ ಎನ್ನುತ್ತಿದೆ ಸಾಮ್ರಾಜ್ಯಶಾಹಿ ನೀತಿ. ಈ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಫೆಬ್ರವರಿಯಲ್ಲೇ ಹರ್ಯಾಣದಲ್ಲಿನ ಹಿಸ್ಸಾರ್‌ನಲ್ಲಿನ ಗುರು ಜಂಬೇಶ್ವರ ವಿಶ್ವವಿದ್ಯಾನಿಲಯದಲ್ಲಿ ‘ಡ್ರಗ್ ಫ್ರೀ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸುತ್ತ ಇದರ ಮೇಲಿನ ಸಮಗ್ರ ಆಚರಣಾ ಯೋಜನೆ 2025ರ ವೇಳೆಗೆ ಸಿದ್ಧವಾಗುತ್ತದೆ ಎಂದು ಹೇಳಿದ್ದಾರೆ. ಆ ಗುರಿ ನೆರವೇರುವುದೆಂದು? ಅದುವರೆಗೂ ಮಾದಕ ದ್ರವ್ಯಗಳ ದೌರ್ಬಲ್ಯವನ್ನು ಗೆಲ್ಲುವುದಕ್ಕೆ ಯೋಗ ಪ್ರಾಣಾಯಾಮಗಳು ಇವೆಯಲ್ಲಾ.....

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)