ಪಿ. ಕಶ್ಯಪ್ ಫೈನಲ್ಗೆ
ಕೆನಡಾ ಓಪನ್
ಕಾಲ್ಗೆರಿ, ಜು.7: ಮಾಜಿ ಕಾಮನ್ವೆಲ್ತ್ ಚಾಂಪಿಯನ್ ಪಿ. ಕಶ್ಯಪ್ ಕೆನಡಾ ಓಪನ್ ಸೂಪರ್ 100 ಟೂರ್ನಮೆಂಟ್ನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
6ನೇ ಶ್ರೇಯಾಂಕದ ಕಶ್ಯಪ್ ಅವರು ಚೀನಾ ತೈಪೆಯ ನಾಲ್ಕನೇ ಶ್ರೇಯಾಂಕದ ವಾಂಗ್ ಝು ವೇ ವಿರುದ್ಧ 14-21, 21-17, 21-18 ಸೆಟ್ಗಳಿಂದ ಜಯ ಗಳಿಸಿ ಫೈನಲ್ ತಲುಪಿದ್ದಾರೆ.
ಶನಿವಾರ ರಾತ್ರಿ ನಡೆದ ಸೆಮಿಫೈನಲ್ನಲ್ಲಿ ವಾಂಗ್ ವಿರುದ್ಧ 1 ಗಂಟೆ ಮತ್ತು 10 ನಿಮಿಷಗಳ ಕಾಲ ಹೋರಾಟ ನಡೆಸಿ , ಗೆಲುವಿನೊಂದಿಗೆ ಫೈನಲ್ನಲ್ಲಿ ಅವಕಾಶ ದೃಢಪಡಿಸಿದರು.
32ರ ಹರೆಯದ ಕಶ್ಯಪ್ ಅವರು ವಾಂಗ್ ವಿರುದ್ಧ ಗೆಲುವಿನ ಅಜೇಯ ದಾಖಲೆಯನ್ನು ಮುಂದುವರಿಸಿದರು. ಎದುರಿಸಿರುವ ಮೂರು ಪಂದ್ಯಗಳಲ್ಲೂ ಕಶ್ಯಪ್ ಜಯ ಗಳಿಸಿದ್ದಾರೆ.
ಕಳೆದ ಮಾರ್ಚ್ನಲ್ಲಿ ಕಶ್ಯಪ್ ಅವರು ಇಂಡಿಯಾ ಓಪನ್ನಲ್ಲಿ ವಾಂಗ್ ವಿರುದ್ಧ ಜಯ ಗಳಿಸಿದ್ದರು.
ಫೈನಲ್ನಲ್ಲಿ ಕಶ್ಯಪ್ ಅವರು ಚೀನಾದ ಲೀ ಶಿ ಫೆಂಗ್ರನ್ನು ಎದುರಿಸುವರು. ಫೆಂಗ್ ಇನ್ನೊಂದು ಸೆಮಿಫೈನಲ್ನಲ್ಲಿ ಜಪಾನ್ನ ಕೊಕಿ ವಾಟಾನಬೆ ಅವರನ್ನು 20-22, 21-10 ಮತ್ತು 21-11 ಅಂತರದಿಂದ ಮಣಿಸಿ ಫೈನಲ್ ತಲುಪಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯನ್ ಇಂಟರ್ನ್ಯಾಶನಲ್ ಚಾಲೆಂಜರ್ನಲ್ಲಿ ಕಶ್ಯಪ್ ಫೈನಲ್ ಪ್ರವೇಶಿಸಿದ್ದರು.
6ನೇ ಶ್ರೇಯಾಂಕದ ಕಶ್ಯಪ್ ಅವರು ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ ನ ಲೂಕಸ್ ಕ್ಲಾರ್ಬೌಟ್ ವಿರುದ್ಧ 12-21, 23-21, 24-22 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ನಲ್ಲಿ ಅವಕಾಶ ದೃಢಪಡಿಸಿದರು.
ಲೂಕಸ್ ಅವರ ಸವಾಲನ್ನು 1ಗಂಟೆ ಮತ್ತು 16 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿ ಕಶ್ಯಪ್ ಗೆಲುವಿನ ನಗೆ ಬೀರಿದ್ದರು.