ಗಾಯಾಳು ಖ್ವಾಜಾ ಸೆಮಿಫೈನಲ್ ನಿಂದ ಔಟ್
ಲಂಡನ್, ಜು.7: ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯದ ಅಗ್ರಸರದಿಯ ಬ್ಯಾಟ್ಸ್ಮನ್ ಉಸ್ಮಾನ್ ಖ್ವಾಜಾ ಅವರು ಇಂಗ್ಲೆಂಡ್ ವಿರುದ್ಧ ಜು.11ರಂದು ನಡೆಯಲಿರುವ ವಿಶ್ವಕಪ್ನ ಸೆಮಿಫೈನಲ್ ಪಂದ್ಯಕ್ಕೆ ಲಭ್ಯರಿಲ್ಲ. ಖ್ವಾಜಾ ಬದಲಿಗೆ ತಂಡಕ್ಕೆ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಮ್ಯಾಥ್ಯೂ ವೇಡ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಶನಿವಾರ ಆಸ್ಟ್ರೇಲಿಯ ವಿರುದ್ಧ ಆಡುವಾಗ ಖ್ವಾಜಾಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು.
Next Story