varthabharthi


ಓ ಮೆಣಸೇ

ಓ ಮೆಣಸೇ…!

ವಾರ್ತಾ ಭಾರತಿ : 8 Jul, 2019
ಪಿ.ಎ. ರೆ

ರಾಜಕಾರಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ

- ಆರ್.ವಿ ದೇಶಪಾಂಡೆ, ಸಚಿವ

ಸಾರ್ವಜನಿಕವಾಗಿ ಕಾಂಗ್ರೆಸ್, ವೈಯಕ್ತಿಕವಾಗಿ ಆರೆಸ್ಸೆಸ್ ಬದುಕು.

---------------------

ವಿಶ್ವಹಿಂದೂ ಪರಿಷತ್ ‘ಲವ್ ಜಿಹಾದ್’ ಅನ್ನು ವಿರೋಧಿಸುತ್ತದೆಯೇ ವಿನಾ ಅಂತರ್ಧರ್ಮೀಯ ವಿವಾಹವನ್ನಲ್ಲ.

- ಬನ್ಸಲ್, ವಿಎಚ್‌ಪಿ ರಾಷ್ಟ್ರೀಯ ವಕ್ತಾರ

ಪುತ್ತೂರಿನ ಸಾಮೂಹಿಕ ಅತ್ಯಾಚಾರದ ವಿಷಯದಲ್ಲೂ ತಮ್ಮ ನಿಲುವುಗಳನ್ನು ಹೇಳಿ ಬಿಡಿ.

---------------------

ಸಚಿವ ಝಮೀರ್ ಅಹ್ಮದ್ ಖಾನ್‌ರನ್ನು ಪೊಲೀಸರು ಬಂಧಿಸಿ ಲಾಕಪ್‌ನಲ್ಲಿಟ್ಟು ಒದ್ದರೆ ಐಎಂಎ ಲೂಟಿ ಬಯಲಾಗುತ್ತದೆ

- ಕೆ.ಎಸ್. ಈಶ್ವರಪ್ಪ, ಶಾಸಕ

ತಾವು ಮಾಡಿರುವ ಲೂಟಿ ಬಯಲಾಗಬೇಕಾದರೆ ಏನು ಮಾಡಬೇಕು?

---------------------

ಮುಂದಿನ ಐದು ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೆನಪಿಡುವಂತಹ ಯೋಜನೆ ತರಲಾಗುವುದು.

- ನಳಿನ್ ಕುಮಾರ್ ಕಟೀಲು, ಸಂಸದ

ಪಂಪ್‌ವೆಲ್ ಬ್ರಿಡ್ಜ್ ಪೂರ್ತಿಯಾದರೆ ಅಷ್ಟೇ ಸಾಕು.

---------------------

  

ಕುದ್ರೋಳಿ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎನ್ನುವ ನನ್ನ ಹೇಳಿಕೆ ನನ್ನ ಜೀವನದಲ್ಲಿ ಮಾಡಿರುವ ಅತಿದೊಡ್ಡ ತಪ್ಪು

- ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ

ಕಾಂಗ್ರೆಸ್ ಕಚೇರಿಗೆ ಕಾಲಿಡುವುದಿಲ್ಲ ಎಂದಿದ್ದರೆ ಕಾಂಗ್ರೆಸ್‌ಗಾದರೂ ಪ್ರಯೋಜನವಾಗುತ್ತಿತ್ತು.

---------------------

ವೀರಶೈವ ಹಾಗೂ ಲಿಂಗಾಯತರು ಕೂಡಿ ಬೆಳೆದಾಗಲೇ ಸಮಾಜದ ಅಭಿವೃದ್ಧಿ ಸಾಧ್ಯ

- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

ಬ್ರಾಹ್ಮಣ ಸಮಾಜದ ಅಭಿವೃದ್ಧಿ ಎಂದು ಸ್ಪಷ್ಟವಾಗಿ ಹೇಳಿ.

---------------------

ನಾನು ಈಗ ಮುಖ್ಯಮಂತ್ರಿ ಅಲ್ಲ. ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಭಿನ್ನಮತೀಯರ ಜೊತೆಗೆ ಈಗಾಗಲೇ ಆಡುವುದನ್ನೆಲ್ಲ ಆಡಿ ಮುಗಿಸಿದ್ದೀರಿ ಎಂದು ಕಾಣುತ್ತದೆ.

---------------------

ಹತ್ತು ವರ್ಷದೊಳಗೆ ಸಂಸ್ಕೃತಿ, ಸಂಪ್ರದಾಯಗಳಿಗೆ ಭಾರತ ವಿಶ್ವ ಗುರುವಾಗಲಿದೆ.

- ಬನ್ವರಿ ಲಾಲ್ ಪುರೋಹಿತ್, ತಮಿಳುನಾಡು ರಾಜ್ಯಪಾಲ

ಗುಂಪುಹತ್ಯೆ ಸಂಸ್ಕೃತಿಗಾಗಿ ಇರಬೇಕು.

---------------------

ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.

- ದೇವೇಗೌಡ, ಮಾಜಿ ಪ್ರಧಾನಿ

ಜನರು ಗೆಲ್ಲಿಸುವುದಿಲ್ಲ ಎಂದು ಮನವರಿಕೆಯಾದ ಬಳಿಕದ ನಿರ್ಧಾರ ಇರಬೇಕು.

---------------------

ರಾಜಕೀಯ ಸನ್ಯಾಸದ ಚಿಂತನೆಯಲ್ಲಿದ್ದ ನಾನು ಕಾಲಭೈರವನ ಪವಾಡದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾದೆ.

- ಕುಮಾರಸ್ವಾಮಿ, ಮುಖ್ಯಮಂತ್ರಿ

ಡಿಕೆಶಿಯವರಿಗೆ ಹೀಗೊಂದು ಹೆಸರಿದೆಯೆ?

---------------------

 ಬಿಜೆಪಿ ವಿಕೆಟ್ ಬೀಳಿಸುವ ಸಾಮರ್ಥ್ಯ ನಮಗೂ ಇದೆ

- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಒಟ್ಟಿನಲ್ಲಿ ವಿಧಾನಸೌಧವನ್ನು ಚಿನ್ನಸ್ವಾಮಿ ಸ್ಟೇಡಿಯಂ ಮಾಡಿ ಬಿಟ್ಟಿರಿ.

---------------------

ಪತ್ರಿಕೆಗಳು ಟೆನ್ಶನ್ ಸೃಪ್ಟಿಸದಿರಲಿ

- ಯು.ಟಿ ಖಾದರ್, ಸಚಿವ

ಪತ್ರಿಕೆ ಓದುವುದನ್ನು ನಿಲ್ಲಿಸಿದರೆ ಆಯಿತು.

---------------------

ಕುಟುಂಬ ಬೇರೆ, ರಾಜಕಾರಣ ಬೇರೆ.

- ಎಂ.ಬಿ. ಪಾಟೀಲ್, ಸಚಿವ

ಆದರೆ ಸದ್ಯಕ್ಕೆ ಎಲ್ಲರೂ ನಡೆಸುತ್ತಿರುವುದು ಕುಟುಂಬಕ್ಕಾಗಿ ರಾಜಕಾರಣ.

---------------------

 ದೋಸ್ತಿ ಜಗಳದಿಂದ ಸರಕಾರ ಬಿದ್ದರೆ ಸುಮ್ಮನೆ ಕೂರಲೂ ನಾವೇನೂ ಸನ್ಯಾಸಿಗಳಲ್ಲ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ತಾವು ಸನ್ಯಾಸಿಯಲ್ಲ ಎನ್ನುವುದನ್ನು ಸಾಬೀತು ಮಾಡುವುದಕ್ಕಾಗಿ ಸರಕಾರ ಬೀಳಿಸುವ ಅಗತ್ಯವಿದೆಯೇ?

---------------------

 ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ

- ತನ್ವೀರ್‌ಸೇಠ್, ಶಾಸಕ

ತಮ್ಮ ಬೆಲೆ ದುಬಾರಿಯಿರಬೇಕು.

---------------------

ಯಾರೇ ಆಗಲಿ, ಯಾರ ಮಗನೇ ಆಗಲಿ ದುರಹಂಕಾರ ಸಹಿಸಲ್ಲ.

- ನರೇಂದ್ರ ಮೋದಿ, ಪ್ರಧಾನಿ

ತಮ್ಮಿಂದಲೇ ಕಲಿತ ದುರಹಂಕಾರ ಅದು.

---------------------

 ಸಾರ್ವಜನಿಕ ಜೀವನದಲ್ಲಿರುವವರಿಗೆ ಈಗ ಮೂರುಕಾಸಿನ ಬೆಲೆಯೂ ಇಲ್ಲ.

- ರಮೇಶ್‌ಕುಮಾರ್, ಸ್ಪೀಕರ್

ನಾಲ್ಕು ಕಾಸು ಮಾಡಲು ಬಂದವರಿಗೆ ಮೂರು ಕಾಸಿನ ಬೆಲೆ ಬೇಕಾಗಿಲ್ಲ.

---------------------

 ನಾನು ಎಚ್.ಡಿ. ದೇವೇಗೌಡರ ಹಾದಿಯಲ್ಲೇ ಹೆಜ್ಜೆ ಹಾಕುತ್ತೇನೆ

- ನಿಖಿಲ್‌ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ನೂತನ ಅಧ್ಯಕ್ಷ

ಆದರೆ ಅವರಷ್ಟು ಚೆನ್ನಾಗಿ ನಟಿಸುವುದು ನಿಮಗೆ ಕಷ್ಟವಾಗಬಹುದು.

---------------------

 ಇನ್ನೊಮ್ಮೆ ಮೋದಿ ಹೆಸರು ಹೇಳಿ ಯಾರಾದರೂ ಮತ ಕೇಳಿದ್ರೆ ಅವರ ಬಾಯಿಗೆ ಬೂಟು ಹಾಕ್ತೇವೆ.

- ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ಯಾವ ಕಂಪೆನಿಯ ಬೂಟು ಎಂದು ಕೇಳುತ್ತಿದ್ದಾರೆ.

---------------------

 ರಾಜಕಾರಣದಲ್ಲಿ ಗುಮಾನಿ, ಗುಟ್ಟು ಇರಬಾರದು.

- ರಮೇಶ್‌ಕುಮಾರ್, ಸ್ಪೀಕರ್

ಗುಮಾನಿ, ಗುಟ್ಟು ಇದ್ದರೇನೇ ಅದನ್ನು ರಾಜಕೀಯ ಎಂದು ಕರೆಯುವುದು.

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಕಾಂಗ್ರೆಸ್ ತಟ್ಟೆಯಲ್ಲಿರುವ ಹೆಗ್ಗಣ ಎಣಿಸಲಿ

- ರವಿಕುಮಾರ್, ಬಿಜೆಪಿ ಪ್ರ.ಕಾರ್ಯದರ್ಶಿ

ಅಂದರೆ ತಮ್ಮ ತಟ್ಟೆಯಲ್ಲಿರುವುದು ಕತ್ತೆ ಎಂದು ಒಪ್ಪಿಕೊಂಡಂತಾಯಿತು.

---------------------

ಲಿಂಗಾಯತ ಪ್ರತ್ಯೇಕ ಧರ್ಮದ ಹಿಂದೆ ಮೀಸಲಾತಿಯ ಗುರಿ ಮಾತ್ರ ಇದೆ.

- ವಿಶ್ವೇಶತೀರ್ಥಸ್ವಾಮೀಜಿ, ಪೇಜಾವರಮಠ

ತಾವು ಬ್ರಾಹ್ಮಣ ಪ್ರತ್ಯೇಕ ಧರ್ಮ ಆಂದೋಲನ ಶುರು ಹಚ್ಚಿದರೆ ಆಯಿತು. ನಿಮಗೂ ಮೀಸಲಾತಿ ನೀಡೋಣವಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು