varthabharthi

ನಿಮ್ಮ ಅಂಕಣ

ಅಭಿವೃದ್ಧಿಯಾಗಿದ್ದರೆ ಅವರೇಕೆ ಇಲ್ಲ್ಲಿಗೆ ಬರುತ್ತಿದ್ದಾರೆ?

ವಾರ್ತಾ ಭಾರತಿ : 8 Jul, 2019
-ಕೆ. ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ಹಿಂದಿ ಮಾತನಾಡುವ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಈಶಾನ್ಯ ಭಾರತದ ಹಲವಾರು ರಾಜ್ಯಗಳು ಬಿಜೆಪಿ ನೇತೃತ್ವದ ಸರಕಾರಗಳು ಹಲವಾರು ವರ್ಷಗಳ ಕಾಲ ಅಧಿಕಾರ ನಡೆಸಿದ ಹಿನ್ನೆಲೆಯಲ್ಲಿ ಅಭಿವೃದ್ಧಿಯಾಗಿದೆ, ಬಡತನ ನಿವಾರಣೆಯಾಗಿದೆ, ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂಬ ರೀತಿಯಲ್ಲಿ ನಮ್ಮ ಕರ್ನಾಟಕದ ಅನೇಕ ಲೋಕಸಭಾ ಸದಸ್ಯರು ಲೋಕಸಭೆಯಲ್ಲಿ ಭಾಷಣ ಮಾಡಿ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂಬ ರೀತಿಯಲ್ಲಿ ಮಾತನಾಡಿರುತ್ತಾರೆ. ಆದರೆ ಅವರು ಹೇಳುವುದು ಸತ್ಯವೇ?

ಬೆಂಗಳೂರು ನಗರದಲ್ಲಿ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಶೇ. 80ರಷ್ಟು ಮಂದಿ ಈಶಾನ್ಯ ಭಾರತದವರೇ ಇದ್ದಾರೆ. ಇನ್ನು ವಾಚ್‌ಮ್ಯಾನ್ ಕೆಲಸ, ಬೈಂಡಿಂಗ್, ಕಾರ್ಪೆಂಟರ್ ಕೆಲಸ, ಕಟ್ಟಡ ಕಟ್ಟುವ ಕೆಲಸ, ಬಣ್ಣ ಬಳಿಯುವ ಕೆಲಸ ಮಾಡುತ್ತಿರುವವರು ಶೇ. 70ರಷ್ಟು ಮಂದಿ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಅಥವಾ ರಾಜಸ್ಥಾನದವರಾಗಿದ್ದಾರೆ. ಇನ್ನು ಬೆಂಗಳೂರು ನಗರದ ಎಲ್ಲ ವೃತ್ತಗಳಲ್ಲಿ ಭಿಕ್ಷಾಟನೆಯನ್ನು ಮಾಡುತ್ತಿರುವ ಭಿಕ್ಷುಕರ ಸಂಖ್ಯೆಯಲ್ಲೂ ಸಹ ಶೇ. 50 ರಷ್ಟು ಮಂದಿ ಉತ್ತರ ಭಾರತದವರಾಗಿದ್ದಾರೆ. ಅಹ್ಮದಾಬಾದ್‌ನಿಂದ ಬಂದಿರುವ ಸಾವಿರಾರು ಕುಟುಂಬಗಳು ಮೆಟ್ರೋ ಹಾದು ಹೋಗುವ ಕಂಬಗಳ ಅಡಿಯಲ್ಲಿ ಬೆಲೂನ್‌ಗಳನ್ನು ಮಾರಾಟ ಮಾಡುತ್ತಿವೆೆ. ಬೆಂಗಳೂರು ನಗರದಲ್ಲಿ ಅನೇಕ ರೀತಿಯ ಅಪರಾಧಗಳೂ ಸಹ ಇವರ ಪರೋಕ್ಷ ಮತ್ತು ಪ್ರತ್ಯಕ್ಷ ಪ್ರಯತ್ನಗಳಿಂದ ನಡೆದಿದೆ. ಆದರೆ, ಕರ್ನಾಟಕ ರಾಜ್ಯದ ಯಾವುದೇ ಒಬ್ಬ ಕನ್ನಡಿಗರು ಉತ್ತರ ಭಾರತದ ಯಾವುದೇ ರಾಜ್ಯದ ವೃತ್ತಗಳಲ್ಲಿ ಅಥವಾ ರಸ್ತೆಗಳಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿಲ್ಲ. ಈ ಸತ್ಯವನ್ನು ಗಮನಿಸಿದಾಗ ಕರ್ನಾಟಕ ರಾಜ್ಯ ಯಾವುದೇ ಪಕ್ಷದ ಸರಕಾರಗಳಿದ್ದರೂ ಸಹ ಉತ್ತರ ಭಾರತದ ಎಲ್ಲ ರಾಜ್ಯಗಳಿಗಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿದೆ ಎಂಬುದನ್ನು ನಾವೇಕೆ ಅಭಿಮಾನದಿಂದ ಹೇಳಿಕೊಳ್ಳುತ್ತಿಲ್ಲ? ರಾಜ್ಯದ ಹೆಮ್ಮೆಯ ವಿಚಾರ ಬಂದಾಗ ಪಕ್ಷದ ಪ್ರತಿನಿಧಿತ್ವ ನಗಣ್ಯವಾಗಿರಬೇಕು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)