ಫೈನಲ್ನಲ್ಲಿ ಎಡವಿದ ಕಶ್ಯಪ್
ಕೆನಡಾ ಓಪನ್
ಕಾಲ್ಗರಿ, ಜು.8: ಕಾಮನ್ವೆಲ್ತ್ ಗೇಮ್ಸ್ ನ ಮಾಜಿ ಚಾಂಪಿಯನ್ ಪಿ.ಕಶ್ಯಪ್ ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ನಲ್ಲಿ ಎಡವಿದ್ದು, ರನ್ನರ್ಸ್ ಅಪ್ಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಇಲ್ಲಿ ಸೋಮವಾರ ಒಂದು ಗಂಟೆ ಹಾಗೂ 16 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಆರನೇ ಶ್ರೇಯಾಂಕದ ಕಶ್ಯಪ್ ಚೀನಾದ ಲಿ ಶಿ ಫೆಂಗ್ ವಿರುದ್ಧ 22-20, 14-21, 17-21 ಗೇಮ್ಗಳ ಅಂತರದಿಂದ ವೀರೋಚಿತ ಸೋಲುಂಡರು.
Next Story