varthabharthi

ಕ್ರೀಡೆ

ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ಪರ ಗರಿಷ್ಠ ಸ್ಕೋರ್ ಗಳಿಸಿದ ವಿಲಿಯಮ್ಸನ್

ವಾರ್ತಾ ಭಾರತಿ : 9 Jul, 2019

ಮ್ಯಾಂಚೆಸ್ಟರ್, ಜು.9: ಕೇನ್ ವಿಲಿಯಮ್ಸನ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಝಿಲ್ಯಾಂಡ್‌ನ ಪರ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು.

ಭಾರತ ವಿರುದ್ಧ ಮಂಗಳವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 95 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 67 ರನ್ ಗಳಿಸುವುದರೊಂದಿಗೆ ವಿಲಿಯಮ್ಸನ್ ಈ ಸಾಧನೆ ಮಾಡಿದರು. ವಿಲಿಯಮ್ಸನ್ 79 ಎಸೆತಗಳಲ್ಲಿ 39ನೇ ಅರ್ಧಶತಕ ಪೂರೈಸಿದರು.

ವಿಲಿಯಮ್ಸನ್ ವಿಶ್ವಕಪ್‌ನಲ್ಲಿ ಒಟ್ಟು 548 ರನ್ ಗಳಿಸಿದರು. 2015ರ ವಿಶ್ವಕಪ್‌ನಲ್ಲಿ ಒಟ್ಟು 547 ರನ್ ಗಳಿಸಿದ್ದ ಆರಂಭಿಕ ಆಟಗಾರ ಗಪ್ಟಿಲ್ ದಾಖಲೆಯನ್ನು ಮುರಿದರು.

ಕಿವೀಸ್ 4ನೇ ಓವರ್‌ನಲ್ಲಿ 1 ರನ್‌ಗೆ 1 ವಿಕೆಟ್ ಕಳೆದುಕೊಂಡಾಗ ತಂಡವನ್ನು ಆಧರಿಸಿದ ವಿಲಿಯಮ್ಸನ್ ಟೂರ್ನಿಯಲ್ಲಿ 4ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಲ್ಲದೆ, ನಿಕೊಲ್ಸ್ ಹಾಗೂ ಟೇಲರ್ ಅವರೊಂದಿಗೆ ಕ್ರಮವಾಗಿ 2ನೇ ಹಾಗೂ 3ನೇ ವಿಕೆಟ್ ಜೊತೆಯಾಟದಲ್ಲಿ 68 ಹಾಗೂ 65 ರನ್ ಸೇರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)