varthabharthi

ಬೆಂಗಳೂರು

ರವಿಶಂಕರ್‌, ನಿಶಾತ್ ನಾಹೀದ್‌ ಗೆ ಪಿಎಚ್‌ಡಿ ಪ್ರದಾನ

ವಾರ್ತಾ ಭಾರತಿ : 9 Jul, 2019

ಬೆಂಗಳೂರು, ಜು.9: ಬೆಂಗಳೂರು ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ರವಿಶಂಕರ್ ಮಂಡಿಸಿದ ಇಂಪ್ಯಾಕ್ಟ್ ಆಫ್ ಅಗ್ರಿಕಲ್ಚರಲ್ ಡೆಬಿಟ್ ವೇವರ್ ಅಂಡ್ ಡೆಬಿಟ್ ರಿಲೀಫ್ ಸ್ಕೀಮ್ 2008 ಆನ್ ದಿ ಅಗ್ರಿಕಲ್ಚರ್ ಲೋನ್ ಸೆಗ್ಮೆಂಟ್ ವಿತ್ ಸ್ಪೆಷಲ್ ರೆಫೆರೆನ್ಸ್ ಟು ಕರ್ನಾಟಕ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕೆನರಾಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನ ಪ್ರಾಧ್ಯಾಪಕ ಡಾ.ವೈ.ನಾಗರಾಜು ಮಾರ್ಗದರ್ಶಕರಾಗಿದ್ದರು.

ನಿಶಾತ್ ನಾಹೀದ್‌

ಬೆಂಗಳೂರಿನ ಜಯನಗರದ ಬಿಇಎಸ್ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕ ನಿಶಾತ್ ನಾಹೀದ ಖಾನಂ ಮಂಡಿಸಿದ ಮುಸ್ಲಿಂ ಮಹಿಳೆಯರ ಶಿಕ್ಷಣದ ಸಮಾಜಶಾಸ್ತ್ರೀಯ ಅಧ್ಯಯನ- ಬೆಂಗಳೂರು ದಕ್ಷಿಣ: ಒಂದು ವಿಶೇಷ ಅಧ್ಯಯನ ಎಂಬ ಸಂಶೋಧನಾ ಪ್ರಬಂಧಕ್ಕೆ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ. ಇವರಿಗೆ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಂಯೋಜಕಿ ಡಾ.ಬಿ.ಪ್ರತಿಭಾ ಮಾರ್ಗದರ್ಶಕರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)