varthabharthi

ಕ್ರೀಡೆ

ವಿಂಬಲ್ಡನ್ ಕೋರ್ಟ್‌ಗೆ ಹಾನಿ; ಸೆರೆನಾಗೆ 10 ಸಾವಿರ ಡಾಲರ್ ದಂಡ

ವಾರ್ತಾ ಭಾರತಿ : 10 Jul, 2019

ಲಂಡನ್, ಜು.9: ವಿಂಬಲ್ಡನ್ ಟೆನಿಸ್ ಅಂಗಣಕ್ಕೆ ಹಾನಿ ಮಾಡಿರುವ ಆರೋಪದಲ್ಲಿ ಅಮೆರಿಕದ ಹಿರಿಯ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ಗೆ 10 ಸಾವಿರ ಡಾಲರ್ ದಂಡ ವಿಧಿಸಲಾಗಿದೆ.

  24ನೇ ಗ್ರಾನ್‌ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಸೆರೆನಾ ಆಟ ಆರಂಭಕ್ಕೂ ಮುನ್ನ ರಾಕೆಟ್‌ನ್ನು ಟೆನಿಸ್ ಕೋರ್ಟ್‌ಗೆ ಬಡಿದು ಹಾನಿಯನ್ನುಂಟು ಮಾಡಿದ್ದರು ಎನ್ನಲಾಗಿದೆ. ಆದರೆ ದಂಡ ವಿಧಿಸಿರುವ ವಿಚಾರದಲ್ಲಿ ಸೆರೆನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

   ಫ್ಯಾಬಿಯೊ ಫೊಗ್ನಿನಿ ಅವರಿಗೂ ಮೂರನೇ ಸುತ್ತಿನಲ್ಲಿ ಟೆನ್ಯಾ ಸ್ಯಾಂಡ್‌ಗ್ರೆನ್ ವಿರುದ್ಧ ಸೋಲಿನ ಬಳಿಕ ಕ್ರೀಡಾಮನೋಭಾವಕ್ಕೆ ವಿರುದ್ಧ ನಡವಳಿಕೆಗಾಗಿ 3 ಸಾವಿರ ಡಾಲರ್ ದಂಡ ವಿಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಇದೇ ತಪ್ಪಿಗಾಗಿ ನಿಕ್ ಕಿರ್ಗಿಯೊಸ್‌ಗೆ 8 ಸಾವಿರ ಡಾಲರ್ ಡಂಡ ವಿಧಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)