varthabharthi

ಕ್ರೀಡೆ

ಭಾರತಕ್ಕೆ ಅಮಿತ್ ಸಾರಥ್ಯ

ವಾರ್ತಾ ಭಾರತಿ : 10 Jul, 2019

ಹೊಸದಿಲ್ಲಿ, ಜು.9: ಸೆಪ್ಟಂಬರ್‌ನಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 8 ಸದಸ್ಯರ ಭಾರತದ ತಂಡದಲ್ಲಿ ಅಮಿತ್ ಪಾಂಘಾಲ್ ನೇತೃತ್ವವಹಿಸಿದ್ದಾರೆ.

ಮನೀಶ್ ಕೌಶಿಕ್ ನಾಲ್ಕು ಬಾರಿಯ ಏಶ್ಯನ್ ಪದಕ ವಿಜೇತ ಶಿವ ಥಾಪರನ್ನು ಹಿಂದಿಕ್ಕಿ 63 ಕೆಜಿ ತೂಕ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ರಶ್ಯದ ಎಕಟೆರಿನ್‌ಬರ್ಗ್‌ನಲ್ಲಿ ಸೆ.7ರಿಂದ 21ರ ತನಕ ನಡೆಯಲಿದೆ.

ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅಮಿತ್(52ಕೆಜಿ)ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಪ್ರವೇಶ ಪಡೆದಿದ್ದಾರೆ.

ಕವಿಂದರ್ ಸಿಂಗ್(57ಕೆಜಿ), ದುರ್ಯೋಧನ್ ಸಿಂಗ್ ನೇಗಿ(69ಕೆಜಿ), ಆಶೀಶ್ ಕುಮಾರ್(75ಕೆಜಿ), ಬ್ರಿಜೇಶ್ ಯಾದವ್(81ಕೆಜಿ), ಸಂಜೀತ್(91ಕೆಜಿ) ಹಾಗೂ ಸತೀಶ್ ಕುಮಾರ್(+91ಕೆಜಿ)ಕಳೆದ ವಾರಾಂತ್ಯದಲ್ಲಿ ಪಟಿಯಾಲದ ಎನ್‌ಐಎಸ್‌ನಲ್ಲಿ ನಡೆದ ಟ್ರಯಲ್ಸ್‌ನ ಮೂಲಕ ಅಮಿತ್‌ರನ್ನು ಸೇರಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)